Kundapra.com ಕುಂದಾಪ್ರ ಡಾಟ್ ಕಾಂ

3.60 ಲಕ್ಷ ರೂ. ಮೌಲ್ಯದ ಅಕ್ಕಿ ಅಕ್ರಮ ದಾಸ್ತಾನು: ಆಹಾರ ನಿರೀಕ್ಷಕರಿಂದ ದಾಳಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮ ಬೋಳಂಬಳ್ಳಿ ದೇವಸ್ಥಾನ ಬಳಿ ಅಕ್ರಮವಾಗಿ ಸಂಗ್ರಹಿಸಿದ್ದ ಅಪಾರ ಪ್ರಮಾಣದ ಪಡಿತರ ಅಕ್ಕಿ ಆಹಾರ ಇಲಾಖೆ ನಿರೀಕ್ಷಕರು ಪೋಲೀಸ್ ಸಹಕಾರದಲ್ಲಿ ಮಂಗಳವಾರ ಸಂಜೆ ದಾಳಿ ನಡೆಸಿ ವಶ ಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಆಧಾರದಲ್ಲಿ ಕುಂದಾಪುರ ಅಹಾರ ನಿರೀಕ್ಷಕ ಸುರೇಶ್ ನೇತೃತ್ವದಲ್ಲಿ ದಾಳಿ ನಡೆಸಿದ್ದು ಒಟ್ಟು 3.60 ಲಕ್ಷ ಮೌಲ್ಯದ 300 ಚೀಲದ 150 ಕ್ವಿಂಟಲ್ ಅಕ್ಕಿ ವಶಕ್ಕೆ ಪಡೆಯಲಾಗಿದೆ. ಬೈಂದೂರು ಆಹಾರ ನಿರೀಕ್ಷಕ ವಿನಯ ಕುಮಾರ್, ಸಿಬ್ಬಂದಿಗಳಾದ ಪುನೀತ್, ವಿನೂತ, ಬೈಂದೂರು ಠಾಣೆಯ ಮಹಾಬಲ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಆಹಾರ ಇಲಾಖೆ ನಿರೀಕ್ಷಕ ಸುರೇಶ್ ವಶಪಡಿಸಿಕೊಂಡಿರುವ ಅಕ್ರಮ ಅಕ್ಕಿ ಚೀಲಗಳು

Exit mobile version