Site icon Kundapra.com ಕುಂದಾಪ್ರ ಡಾಟ್ ಕಾಂ

ಶಾರ್ಟ್‌ ಸರ್ಕ್ಯೂಟ್‌: ಎರಡು ರಿಕ್ಷಾ ಬೆಂಕಿಗಾಹುತಿ

ಕುಂದಾಪುರ: ಇಲ್ಲಿನ ಸಂಗಮ್‌ ಬಳಿಯ ಆಟೋ ಗ್ಯಾರೇಜಿನಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ದುರಸ್ತಿಗಾಗಿ ಇರಿಸಲಾಗಿದ್ದ ಎರಡು ಆಟೋರಿಕ್ಷಾಗಳಿಗೆ ಬೆಂಕಿ ತಗುಲಿ ಸುಟ್ಟು ಹೋಗಿದ್ದು  ಸುಮಾರು ಒಂದೂವರೆ ಲಕ್ಷ  ರೂ. ಹಾನಿ ಸಂಭವಿಸಿದೆ.

ಕೊಲ್ಲೂರು ದಳಿ ನಿವಾಸಿ ನಾಗರಾಜ್‌ ಅವರು ದುರಸ್ತಿಗಾಗಿ ಇರಿಸಿದ್ದ  ಆಟೋರಿಕ್ಷಾ ಹಾಗೂ ಗ್ಯಾರೇಜ್‌ ಮಾಲಕ ಸಂತೋಷ್‌ ಅವರ ರಿಕ್ಷಾಕ್ಕೂ ಬೆಂಕಿ ತಗುಲಿ ಎರಡು ರಿಕ್ಷಾಗಳೂ ಸಂಪೂರ್ಣ ಸುಟ್ಟು ಹೋಗಿದೆ.

ತಡ ರಾತ್ರಿ ರಿಕ್ಷಾಕ್ಕೆ ಬೆಂಕಿ ತಗಲಿದ್ದರಿಂದ ಬೆಂಕಿ ಹೊತ್ತಿ ಉರಿಯುವ ಶಬ್ದ ಕೇಳಿ ಪಕ್ಕದ ಮನೆಯವರು ಹೊರಗೆ ಬಂದು ನೋಡುವಾಗ ಎರಡೂ ರಿಕ್ಷಾಗಳಿಗೆ ಸಂಪೂರ್ಣ ಬೆಂಕಿ ತಗಲಿತ್ತು. ಕೂಡಲೇ ಅಕ್ಕಪಕ್ಕದವರು   ಪೈಪಿನಿಂದ ನೀರು ಹಾರಿಸಿ ಬೆಂಕಿಯನ್ನು ನಂದಿಸಿದರು. ಘಟನಾ ಸ್ಥಳಕ್ಕೆ ಕುಂದಾಪುರ ಠಾಣೆಯ ಪಿಎಸ್‌ಐ ನಾಸೀರ್‌ ಹುಸೆ„ನ್‌ ಹಾಗೂ ಡಿವೈಎಸ್ಪಿ ಮಂಜುನಾಥ್‌ ಶೆಟ್ಟಿ  ಭೇಟಿ ನೀಡಿ ಪರಿಶೀಲಿಸಿದ್ದಾರೆ.

Exit mobile version