Site icon Kundapra.com ಕುಂದಾಪ್ರ ಡಾಟ್ ಕಾಂ

ಜೆಸಿಐ ಬೈಂದೂರು ಸಿಟಿಯಿಂದ ಬಾಲಕನಿಗೆ ನೆರವು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಥಲಸ್ಸಿಮಿಯಾ ಮೇಜರ್ ಕಾಯಿಲೆಯಿಂದ ಬಳಲುತ್ತಿರುವ ಇಲ್ಲಿನ ಗೋಳಿಹೊಳೆ ಗ್ರಾಮದ ಮಾವಿನ ಮನೆಯ ಮಂಜುನಾಥ ಹಾಗೂ ಸುಮತಿ ದಂಪತಿಗಳ ಮಗ ಸುಶಾಂತ್‌ಗೆ ಜೆಸಿಐ ಬೈಂದೂರುಸಿಟಿಯಿಂದ 30000 ರೂ. ಧನಸಹಾಯವನ್ನು ಮಗುವಿನ ಹೆತ್ತವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭ ಜೆಸಿಐ ಇಂಡಿಯಾ ಪ್ರೋಗ್ರಾಮ್ ಡೈರೆಕ್ಟರ್ ಜೆಸಿ ಸೆನ್ ಅಬ್ದುಲ್ ಜಬ್ಬಾರ್ ಸರ್, ವಲಯಾಧಿಕಾರಿ   ಹೆಚ್‌ಜಿಎಫ್ ಮಣಿಕಂಠ ಎಸ್ ದೇವಾಡಿಗ, ಹಾಗೂ ಜೆಸಿಐ ಬೈಂದೂರು ಸಿಟಿ ಇದರ ಅಧ್ಯಕ್ಷರಾದ  ಹೆಚ್‌ಜಿಎಫ್  ಶ್ರೀಧರ ಆಚಾರ್ಯ, ಕಾರ್ಯದರ್ಶಿ ಸವಿತಾ ದಿನೇಶ್ ಗಾಣಿಗ, ಸದಸ್ಯರಾದ ರಾಘವೇಂದ್ರ ಹೊಳ್ಳ, ಇದ್ದರು.

Exit mobile version