Site icon Kundapra.com ಕುಂದಾಪ್ರ ಡಾಟ್ ಕಾಂ

ಮೀನುಗಾರರಿಗೆ ಕೋವಿಡ್-2ನೇ ಅಲೆಯ ಪರಿಹಾರ ಪ್ಯಾಕೇಜ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ರಾಜ್ಯದಲ್ಲಿಕೋವಿಡ್ 2ನೇ ಅಲೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಈಗಾಗಲೇ ಲಾಕ್‍ಡೌನ್‍ ಜಾರಿಯಲ್ಲಿದ್ದು. ಇದರಿಂದ ಬಾಧಿತವಾದ ಸಮಾಜದ ವಿವಿಧ ವರ್ಗಗಳಿಗೆ ಪರಿಹಾರದ ಪ್ಯಾಕೇಜ್ ಸರ್ಕಾರವು ಘೋಷಣೆ ಮಾಡಿದೆ.

ಪ್ರಸ್ತುತ ಸಾಲಿನಲ್ಲಿ ಭಾರತ ಸರ್ಕಾರದ ಉಳಿತಾಯ ಮತ್ತು ಪರಿಹಾರ ಯೋಜನೆಯಡಿ ನೋಂದಾಯಿಸಿಕೊಂಡ ಮೀನುಗಾರರಿಗೆ ತಲಾ ರೂ.3000 ಪರಿಹಾರವನ್ನು ಕೋವಿಡ್ಎರಡನೇ ಪ್ಯಾಕೇಜ್ ನಿಧಿಯಡಿಯಲ್ಲಿ ಸರ್ಕಾರದ ಮಾರ್ಗಸೂಚಿ ಮೇರೆಗೆ ಘೋಷಿಸಲಾಗಿದೆ.

ಈ ಯೋಜನೆಯ ಸದರಿ ಪರಿಹಾರವನ್ನುಡಿ.ಬಿ.ಟಿ (ಡೈರೆಕ್ಟ್  ಬೆನಿಫಿಶರಿಟ್ರಾನ್‍ಸ್ಫರ್  ಪೋರ್ಟ್‍ಲ್) ಮುಖಾಂತರ ಅರ್ಹ ಫಲಾನುಭವಿಗಳಿಗೆ ಪಾವತಿಸಬೇಕಾಗಿರುವುದರಿಂದ ಎಲ್ಲಾ ಫಲಾನುಭವಿಗಳು ತಮ್ಮಆಧಾರ್ ಸಂಖ್ಯೆಯನ್ನು ಬ್ಯಾಂಕ್ಖಾತೆಗೆ ಲಿಂಕ್ ಮಾಡದಿದ್ದಲ್ಲಿಕೂಡಲೇ ಲಿಂಕ್ ಮಾಡಿಸತಕ್ಕದ್ದು.

ಸಾಂಪ್ರದಾಯಿಕ ದೋಣಿ ಮಾಲೀಕರು (ಎನ್ಎಮ್-ನಾನ್-ಮೋಟರೈಸ್ಡ್ ಯಡಿಯಲ್ಲಿ ನೋಂದಾಯಿತ ದೋಣಿ ಮಾಲೀಕರು)ತಮ್ಮದೋಣಿಯ ಆರ್.ಸಿ., ಆಧಾರ್ಕಾರ್ಡ್, ಮೊಬೈಲ್ ಸಂಖ್ಯೆ, ಆಧಾರ್ ಲಿಂಕ್ ಲಗತ್ತಿಸಲಾದ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯನ್ನು ಸಂಬಂಧಿತ ಪ್ರಾಧಿಕೃತ ಅಧಿಕಾರಿಗಳ ಕಚೇರಿಗೆ ಒದಗಿಸಬೇಕೆಂದು ಮೀನುಗಾರಿಕೆ ಹಿರಿಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version