Kundapra.com ಕುಂದಾಪ್ರ ಡಾಟ್ ಕಾಂ

ಮುದ್ದು ರಾಧಾ-ಕೃಷ್ಣ ಸ್ವರ್ಧೆ: ವಿಜೇತರಿಗೆ ಬಹುಮಾನ ವಿತರಣೆ

ಕುಂದಾಪುರ: ರೋಟರ‍್ಯಾಕ್ಟ್ ಕ್ಲಬ್ ಕುಂದಾಪುರ ಹಾಗೂ ಆನ್ಸ್ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ಆಭರಣ ಜ್ಯುವೆಲ್ಲರ‍್ಸ್ ಪ್ರಾಯೋಜಕತ್ವದಲ್ಲಿ ೨೫ನೇ ವರ್ಷದ ಮುದ್ದು ರಾಧಾ ಮುದ್ದು ಕೃಷ್ಣ ಸ್ಪರ್ಧೆಯು ಕುಂದಾಪುರದ ರೋಟರಿ ಲಕ್ಷ್ಮೀ ನರಸಿಂಹ ಕಲಾ ಮಂದಿರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ರಾಜ್ಯ ಬಿಜೆಪಿ ಮೀನುಗಾರಿಕ ಪ್ರಕೋಷ್ಠದ ರಾಜ್ಯ ಸಂಚಾಲಕ ಕಿಶೋರ್ ಕುಮಾರ್ ಬಿ. ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು, ರೋಟರ‍್ಯಾಕ್ಟ್ ಕ್ಲಬ್ ಕುಂದಾಪುರದ ಅಧ್ಯಕ್ಷ ರಾಘವೇಂದ್ರ ಕೆ.ಸಿ., ಕಾರ್ಯದರ್ಶಿ ಹರ್ಷ ಶೇಟ್, ಆನ್ಸ್ ಕ್ಲಬ್ ಅಧ್ಯಕ್ಷೆ ಭಾರತಿ ಪ್ರಕಾಶ್ ಶೆಟ್ಟಿ, ಕಾರ್ಯದರ್ಶಿ ಸುನೇತ್ರ ಸತೀಶ್ ಕೋಟ್ಯಾನ್, ರೋಟರ‍್ಯಾಕ್ಟ್ ಸಭಾಪತಿ ಹೆಚ್.ಎಸ್.ಹತ್ವಾರ್ ರೋಟರ‍್ಯಾಕ್ಟ್ ಪೂರ್ವಾಧ್ಯಕ್ಷ ರಾಘವೇಂದ್ರ ಚರಣ್ ನಾವಡ ಇನ್ನಿತರರು ಉಪಸ್ಥಿತರಿದ್ದರು.

ಸುಮಾರು 200ಕ್ಕೂ ಅಧಿಕ ಚಿಣ್ಣರು ಕೃಷ್ಣ ರಾಧೆ ವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ನಾಲ್ಕು ವಿಭಾಗಗಳಲ್ಲಿ ನಡೆದ ಸ್ಪರ್ಧೆಯ ತೀರ್ಪುಗಾರರಾಗಿ ಪಾರ್ವತಿ ಕೊತ್ವಾಲ್, ಲೇಖಾ ಕಾರಂತ್, ಚೇತನ ಗೋಪಾಲಕೃಷ್ಣ ಶೆಟ್ಟಿ ಸಹಕರಿಸಿದರು.

ಸಮಾರೋಪ: ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆಯ ಸಂದರ್ಭದಲ್ಲಿ ರೋಟರ‍್ಯಾಕ್ಟ್ ಕ್ಲಬ್ ಕುಂದಾಪುರದ ಅಧ್ಯಕ್ಷ ರಾಘವೇಂದ್ರ ಕೆ.ಸಿ, ಪೂರ್ವಾಧ್ಯಕ್ಷರಾದ ಪ್ರವೀಣ್ ಕುಮಾರ್ ಟಿ., ಹುಸೇನ್ ಹೈಕಾಡಿ, ಶ್ರೀಧರ ಸುವರ್ಣ, ರೋಟರಿ ಕ್ಲಬ್ ಕುಂದಾಪುರದ ಪೂರ್ವಾಧ್ಯಕ್ಷರಾದ ಕೆ.ಆರ್. ನಾಯ್ಕ್, ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ, ಮನೋಜ್ ನಾಯರ್, ಉದಯ್ ಕುಮಾರ್ ಶೆಟ್ಟಿ, ರೋಟರ‍್ಯಾಕ್ಟ್ ಕಾರ್ಯದರ್ಶಿ ಹರ್ಷ ಶೇಟ್, ಸದಸ್ಯರಾದ ಸನತ್, ರಮೀಜ್ ಇನ್ನಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಂಜುನಾಥ್ ಕಾಮತ್ ಪ್ರಾಯೋಜಕತ್ವದಲ್ಲಿ ತೋಲ್ ಮೋಲ್ ಕೆ ಬೋಲ್ ಮಾದರಿಯಲ್ಲಿ ಗೃಹೋಪಯೋಗಿ ವಸ್ತುಗಳನ್ನು ಪೋಷಕರಿಗೆ ಬಹುಮಾನವಾಗಿ ನೀಡಲಾಯಿತು. ರೋಟರ‍್ಯಾಕ್ಟ್ ಪೂರ್ವಾಧ್ಯಕ್ಷ ರಾಘವೇಂದ್ರ ಚರಣ್ ನಾವಡ ಕಾರ್ಯಕ್ರಮ ನಿರ್ವಹಿಸಿದರು. ಆನ್ಸ್ ಕ್ಲಬ್ ಅಧ್ಯಕ್ಷೆ ಭಾರತಿ ಪ್ರಕಾಶ್ ಶೆಟ್ಟಿ ವಂದಿಸಿದರು.

ಬಹುಮಾನ ವಿಜೇತರು : 3 ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ಪ್ರಥಮ ಬಹುಮಾನ ಐಸಿರಿ ಮತ್ತು ಮಾನ್ಯ ಡಿ.ಕೆ., ದ್ವಿತೀಯ ಬಹುಮಾನ ಸ್ನಿಗ್ಧ ಮತ್ತು ಇಚ್ಛಾ,  ತೃತೀಯ ಬಹುಮಾನ ವಿಶ್ಮಾ ಮತ್ತು ರಿಶ್ಮಾ ಹಾಗೂ ಮುದ್ದು ರಾಧಾ ಅಧಿತಿ, ಮುದ್ದು ಕೃಷ್ಣ ಸಾನ್ವಿ ವೈಯಕ್ತಿಕ ಬಹುಮಾನ ಪಡೆದುಕೊಂಡರು. ಎಲ್.ಕೆ.ಜಿ. ಮತ್ತು ಯು.ಕೆ.ಜಿ. ವಿಭಾಗದಲ್ಲಿ ಪ್ರಥಮ ಬಹುಮಾನ ರಿಷಿಕಾ ಮತ್ತು ಪ್ರಾರ್ಥನಾ, ದ್ವಿತೀಯ ಬಹುಮಾನ ಅಕ್ಷರ ಮತ್ತು ಅಲೈನಾ,  ತೃತೀಯ ಬಹುಮಾನ ಪ್ರತೀಕ್ಷಾ ಮತ್ತು ಸಮರ್ಥ ಬಹುಮಾನ ಪಡೆದುಕೊಂಡರು.  1ಮತ್ತು 2ನೇ ತರಗತಿ ವಿಭಾಗದಲ್ಲಿ  ಪ್ರಥಮ ಬಹುಮಾನ ಚಿನ್ಮಯ ಮತ್ತು ಗ್ರೀಷ್ಮಾ, ದ್ವಿತೀಯ ಬಹುಮಾನ ನಂದಿಕ ಕುಂದರ್ ಮತ್ತು ಶಕ್ತಿ ಶೆಟ್ಟಿ,  ತೃತೀಯ ಬಹುಮಾನ ಸೃಜನ್ ಮತ್ತು ಶಿವಾನಿ ಹಾಗೂ ಮುದ್ದು ರಾಧಾ ಪವನ, ಮುದ್ದು ಕೃಷ್ಣ ತನ್ವಿ ವೈಯಕ್ತಿಕ ಬಹುಮಾನ ಪಡೆದುಕೊಂಡರು. ಹಾಗೂ 3 ಮತ್ತು 4ನೇ ತರಗತಿ ವಿಭಾಗದಲ್ಲಿ ಪ್ರಥಮ ಬಹುಮಾನ ಶರಧಿ ಮತ್ತು ಮಾನ್ವಿ, ದ್ವಿತೀಯ ಬಹುಮಾನ ಹರ್ಷಿತಾ ಮತ್ತು ದಿಲೀಪ್ ಡಿ.ಕೆ.,  ತೃತೀಯ ಬಹುಮಾನ ರತಿಕಾ ಮತ್ತು ದಿವ್ಯ ಭಟ್ ಹಾಗೂ ಮುದ್ದು ರಾಧಾ ಪ್ರತ್ವಿನ್, ಮುದ್ದು ಕೃಷ್ಣ ನಿತೇಶ್ ವೈಯಕ್ತಿಕ ಬಹುಮಾನ ಪಡೆದುಕೊಂಡರು.

Exit mobile version