Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಕೀಟ ಜನ್ಯ ರೋಗಗಳ ಮಾಹಿತಿ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಆನೆಕಾಲು ರೋಗ ಪತ್ತೆ ಹಚ್ಚುವ ನಿಟ್ಟಿನಲ್ಲಿ 2019 ರಿಂದ 2021ಮೇ ತನಕ 72 ಜನರ ರಕ್ತದ ಮಾದರಿ ಸಂಗ್ರಹಸಿದ್ದು, ಒಂದೇ ಒಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಉಡುಪಿ ಜಿಲ್ಲೆಯಲ್ಲಿ ಹೊಸ ಮಲೇರಿಯಾ ಪ್ರಕರಣ ಪತ್ತೆಯಾಗದೆ ಇದ್ದು, ಜಿಲ್ಲೆ ಮಲೇರಿಯಾ ಮುಕ್ತವಾಗಿದ್ದು, ಘೊಷಣೆ ಮಾಡುವುದೊಂದೇ ಬಾಕಿಯಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಪ್ರೇಮಾನಂದ್ ಮಾಹಿತಿ ನೀಡಿದರು.

ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ನಿಯಂತ್ರಣ ಕಾರ್ಯಕ್ರಮ, ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಆಶ್ರಯದಲ್ಲಿ ಆರೋಗ್ಯಾಧಿಕಾರಿ ಕಚೇರಿಯಲ್ಲಿ ನಡೆದ ಕೀಟ ಜನ್ಯ ರೋಗಗಳ ಮಾಹಿತಿ ಕಾರ್ಯಕ್ರದಲ್ಲಿ ಮಾತನಾಡಿದರು.
ಕುಂದಾಪುರ ಗಂಗೊಳ್ಳಿಯಲ್ಲಿ ಆನೆಕಾಲು ರೋಗ ಹೆಚ್ಚಿದ್ದು, ನಿರಂತರ ಎಚ್ಚರಿಕೆ ಮದ್ದು ಮಾಡುವ ಮೂಲಕ ಕಳೆದ ಐದು ವರ್ಷದಿಂದ ಪೈಲೇರಿಯಾ ಕುಂದಾಪುದಲ್ಲಷ್ಟೇ ಅಲ್ಲ. ಜಿಲ್ಲೆಯಲ್ಲೂ ಕಂಡಿಲ್ಲ. ಕರೋನಾ ನಡುವೆಯೂ ಮಲೇರಿಯಾ, ಚಿಕನ್ ಗುನ್ಯ, ಡೆಂಗ್ಯೂ ಪರೀಕ್ಷೆ ಅವಶ್ಯವಾಗಿ ಮಾಡಿಸಿಕೊಳ್ಳುವಂತೆ ಸೂಚಿಸಿದರು.

ಸಾಂಕ್ರಾಮಿಕ ಕಾಯಿಲಗೆಗಳು ವಾತಾವರಣ ಅವಲಂಭಿತವಾಗಿದ್ದು, ವಲಸೆ, ಜನ ದಟ್ಟಣೆ ಕಾಯಿಲೆ ಬೇಗ ಹರಡಲು ಕಾರಣವಾಗುತ್ತದೆ. ಮಳೆಗಾದಲ್ಲಿ ಸೊಳ್ಳೆಗಳಿಗೆ ಆಶ್ರಯ ಆಗದಂತೆ ಪರಿಸರ ಸ್ವಚ್ಛತೆ, ನೀರು ನಿಲ್ಲಂದತೆ ಮಾಡುವುದು, ಕೀಟಗಳ ಹತೋಟಿ ಮೂಲಕ ರೋಗ ಮುಕ್ತ ವಾತಾವರಣ ಸೃಷ್ಟಿಮಾಡಬೇಕು. ಸೊಳ್ಳೆಗಳ ಆಕಾರ, ಕೂರುವ ಭಂಗಿ, ಕಡಿತದ ಸಮಯದ ಮೂಲಕ ಸಂಭನೀಯ ರೋಗ ಅಂದಾಜಿಸಲು ಸಾಧ್ಯ ಎಂದರು.
ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ. ರಾಜೇಶ್ವರ ಮಾತನಾಡಿ, ಕರೋನಾ ಪರೀಕ್ಷೆಗೆ ಮನೆ ಮನೆಗೆ ತೆರಳಿದ ಸಮಯದಲ್ಲಿ ಮಲೇರಿಯಾ ಇತರ ಸಾಂಕ್ರಾಮಿಕ ರೋಗಳ ಬಗ್ಗೆಯೂ ಪರೀಕ್ಷೆ ಮಾಡಲಾಗುತ್ತದೆ. ಕರೋನಾ ಜೊತೆ ಇತರೆ ರೋಗಗಳ ಬಗ್ಗೆಯೂ ಹೆಚ್ಚಿನ ಎಚ್ಚರಿಕೆ ವಹಿಸಲಾಗುತ್ತದೆ ಎಂದರು.

ಕುಂದಾಪುರ ಕಾರ‍್ಯನಿರತ ಪತ್ರಕರ್ತ ಸಂಘ ಅಧ್ಯಕ್ಷ ಶಶಿಧರ ಹೆಮ್ಮಾಡಿ ಉದ್ಘಾಟಿಸಿದರು. ಪ್ರಧಾನ ಕಾರ‍್ಯದರ್ಶಿ ನಾಗರಾಜ ರಾಯಪ್ಪನಮಠ ಇದ್ದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಭಾಗ್ಯಲಕ್ಷ್ಮೀ ಸ್ವಾಗತಿಸಿ, ವಂದಿಸಿದರು.

Exit mobile version