ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ, ಅಭಯ ಹಸ್ತ ಹೆಲ್ಪ್ಲೈನ್ ಉಡುಪಿ ಗೆಳೆಯರ ಬಳಗ ಆನಗಳ್ಳಿ, ದತ್ತಾಶ್ರಮ ಆನಗಳ್ಳಿ, ಹ್ಯಾಲ್ಪಿಂಗ್ ಹ್ಯಾಂಡ್ಸ್ ಕುಂದಾಪುರ ಇವರ ಸಹಕಾರದಲ್ಲಿ ಗೆಳೆಯರ ಬಳಗ ಆನಗಳ್ಳಿ ಕುಂದಾಪುರ ಸಭಾಂಗಣದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ರಕ್ತದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಇತ್ತಿಚೆಗೆ ನಡೆಯಿತು.
ಉಡುಪಿ ಅಭಯ ಹಸ್ತ ಹೆಲ್ಪ್ ಲೈನ್ ಇದರ ಅಧ್ಯಕ್ಹರಾದ ಯಶ್ ಪಾಲ್ ಸುವರ್ಣ ರಕ್ತದಾನ ಶಿಬಿರಕ್ಕೆ ಆಗಮಿಸಿ ಶುಭಕೋರಿದರು. ಉದ್ಯಮಿ ಜಗದೀಶ್ ಕೊಟೇಶ್ವರ ಉದ್ಘಾಟಿಸಿದರು, ಕುಂದಾಪುರ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಅದ್ಯಕ್ಷರಾದ ಜಯಕರ ಶೆಟ್ಟಿ ಅಧ್ಯಕ್ಹತೆ ವಹಿಸಿದ್ದರು. ಈ ಸಂದರ್ಭದಲ್ಲಿ ರಕ್ತದಾನ ಹಾಗೂ ರಕ್ತದಾನ ಶಿಬಿರ ಆಯೋಜನೆ ಮಾಡಿದ ಸಂಘಟನೆಗಳನ್ನು ಗುರುತಿಸಿ ಸನ್ಮಾನಿಸಲಾಯಿತು
ಮುಖ್ಯ ಅತಿಥಿಗಳಾಗಿ ಸುದಾಕರ್ ಕಾಂಚನ್ ಕುಂದಾಪುರ, ಉಡುಪಿ ಅಭಯ ಹಸ್ತ ಹೆಲ್ಫ್ ಲೈನ್ ಅಧ್ಯಕ್ಷರಾದ ರಾಜೇಶ ಶೆಟ್ಟಿ ಮುನಿಯಾಲು, ಉಡುಪಿ ಅಭಯಹಸ್ತ ಹೆಲ್ಫ್ ಲೈನ್ ಸಂಸ್ಥಾಪಕ ಅಧ್ಯಕ್ಷರಾದ ಸತೀಶ ಸಾಲ್ಯಾನ್ ಮಣಿಪಾಲ್, ಹೆಲ್ಪಿಂಗ್ ಹ್ಯಾಂಡ್ಸ್ ಕುಂದಾಪುರ ಅಧ್ಯಕ್ಷರಾದ ಪ್ರದೀಪ ಮೊಗವೀರ, ಕುಂದಾಪುರ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಭಾಸ್ಕರ ಬಿಲ್ಲವ ಹೇರಿಕುದ್ರು, ಕುಂದಾಪುರ ಆನಗಳ್ಳಿ ಗೆಳೆಯರ ಬಳಗ ಅಧ್ಯಕ್ಷರಾದ ರವಿ ಬಿ. ನಾಯ್ಕ್ ಉಪಸ್ಥತರಿದ್ದರು. 2 ನೇ ಕೊವಿಡ್ ಲಾಕ್ ಡೌನ್ ಹಾಗೂ ಕೊವಿಡ್ ಲಸಿಕೆ ಪಡೆದ ರಕ್ತದಾನಿಗಳ ಕೊರತೆಯ ನಡುವೆ ಯಶಸ್ವಿ 120 ರಕ್ತದಾನಿಗಳು ರಕ್ತದಾನ ಮಾಡಿದರು.