Site icon Kundapra.com ಕುಂದಾಪ್ರ ಡಾಟ್ ಕಾಂ

ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್: ಬೈಂದೂರು ಆರೋಗ್ಯ ಕೇಂದ್ರಕ್ಕೆ ಸ್ಟೀಮ್, ಫೇಸ್ ಶೀಲ್ಡ್ ಹಸ್ತಾಂತರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್ ಇದರ ವತಿಯಿಂದ ಬಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಟೀಮ್ ಹಾಗೂ ಫೇಸ್ ಶೀಲ್ಡ್‌ನ್ನು ಹಸ್ತಾಂತರಿಸಲಾಯಿತು. ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಟೀಮ್ ಹಾಗೂ ಫೇಸ್ ಶೀಲ್ಡ್ ಹಸ್ತಾಂತರಿಸಿದರು.

ಜಿಲ್ಲಾಧಿಕಾರಿ ಸದಾಶಿವ ಪ್ರಭು ಮಾತನಾಡಿ,ಅವರು ಕೋವಿಡ್ ನಿಯಂತ್ರಣದಲ್ಲಿ ಪ್ರತಿಯೊಬ್ಬ ನಾಗರೀಕರ ಜವಬ್ದಾರಿ ಅತ್ಯಂತ ಮುಖ್ಯವಾಗಿದೆ.ನಮ್ಮ ಕುಂದಾಪ್ರ ಕನ್ನಡ ಬಳಗ ಕಳೆದ ಹಲವು ವರ್ಷಗಳಿಂದ ಊರಿನ ಸಮಸ್ಯೆಗೆ ಮತ್ತು ವಿದೇಶದಲ್ಲಿ ಕುಂದಾಪುರ ಕನ್ನಡಿಗರಿಗೆ ಸ್ಪಂದಿಸುವ ಮೂಲಕ ಉತ್ತಮ ಸ್ಪಂದನೆ ನೀಡುತ್ತಿದೆ ಎಂದರು.

ಈ ಸಂದರ್ಭ ಉಡುಪಿ ಜಿಲ್ಲಾ ಕೋವಿಡ್ ನೋಡೆಲ್ ಅಧಿಕಾರಿ ಡಾ. ಪ್ರೇಮಾನಂದ, ಬೈಂದೂರು ತಹಶೀಲ್ದಾರ ಶೋಭಾಲಕ್ಷ್ಮಿ ಎಚ್.ಎಸ್, ಬೈಂದೂರು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನಂದಿನಿ, ಪಟ್ಟಣ ಪಂಚಾಯತ್ ಅಧಿಕಾರಿ ನವೀನ್, ನಮ್ಮ ಕುಂದಾಪ್ರ ಕನ್ನಡ ಬಳಗದ ಶೀನ ದೇವಾಡಿಗ, ಸುಧಾಕರ ಶೆಟ್ಟಿ ಹುಂತರ‍್ಕಿ, ಪ್ರಕಾಶ ಹಾಗೂ ಆರೋಗ್ಯ ಇಲಾಖೆಯ ಸಿಬಂದ್ದಿಗಳು ಉಪಸ್ಥಿತರಿದ್ದರು.

Exit mobile version