Kundapra.com ಕುಂದಾಪ್ರ ಡಾಟ್ ಕಾಂ

ಭಂಡಾರ್ಕಾರ್ಸ್ ಕಾಲೇಜು ಲಸಿಕಾ ಅಭಿಯಾನ ಪೂರ್ಣ, ಪೋಷಕರಿಂದ ಮೆಚ್ಚುಗೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸರಕಾರದ ಉಚಿತ ಲಸಿಕಾ ಅಭಿಯಾನದ ಪೂರ್ಣ ಸದುಪಯೋಗವನ್ನು ಪಡೆದುಕೊಂಡಿರುವ ಭಂಡಾರ್ಕಾರ್ಸ್ ಕಾಲೇಜು ೧೮ ವರ್ಷ ಮೇಲ್ಪಟ್ಟ ಕಾಲೇಜು ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ಲಸಿಕೆ ನೀಡಿದ್ದು ಈ ಬಗ್ಗೆ ಪೋಷಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ.

ಉಡುಪಿ ಜಿಲ್ಲಾ ಆಸ್ಪತ್ರೆ, ಕುಂದಾಪುರ ತಾಲೂಕಾ ಆಸ್ಪತ್ರೆ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಕುಂದಾಪುರ ಘಟಕ ಮತ್ತು ಭಂಡಾರ್ಕಾರ್ಸ್ ಕಾಲೇಜಿನ ಸಹಯೋಗದಲ್ಲಿ ಜೂನ್ 25ರಿಂದ ಮೂರು ದಿನಗಳ ಕಾಲ ಉಚಿತ ಲಸಿಕಾ ಅಭಿಯಾನ ವನ್ನು ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ಸರಕಾರದ ಈ ಅಭಿಯಾನದ ಸದುಪಯೋಗವನ್ನು ಕಾಲೇಜಿನ ಹೆಚ್ಚಿನ ವಿದ್ಯಾರ್ಥಿಗಳಿಗೆ ತೆಗೆದುಕೊಂಡರು.

ಒಟ್ಟು ಮೂರು ದಿನಗಳ ಕಾಲ ನಡೆದ ಈ ಅಭಿಯಾದಲ್ಲಿ ಮೊದಲನೇ ದಿನ ೪೬೦ ಎರಡನೇ ದಿನ ೧೦೫೧ ಮತ್ತು ಮೂರನೇ ದಿನ ೪೫೧ ಮಂದಿ ಮೊದಲನೇ ಮತ್ತು ಕೆಲವರು ಎರಡನೇ ಡೋಸ್‌ನ್ನು ತೆಗೆದುಕೊಂಡಿದ್ದಾರೆ.

ಉದ್ಘಾಟನೆ:
ಕಾರ್ಯಕ್ರಮವನ್ನು ಕುಂದಾಪುರ ತಾಲೂಕಾ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ರಾಬರ್ಟ ರೆಬೆಲ್ಲೋ ಉದ್ಘಾಟಿಸಿ ಮಾತನಾಡಿ ವ್ಯಾಕ್ಸಿನ ತೆಗೆದುಕೊಂಡಾಗ ಕೋವಿಡ್ ಸಾಂಕ್ರಾಮಿಕ ರೋಗ ಬಂದರೂ ಸಹ ಅದರ ತೀವ್ರತೆಯನ್ನು ಕಡಿಮೆ ಮಾಡುತ್ತದೆ. ಇದು ತುಂಬಾ ಸುರಕ್ಷಿತ ವ್ಯಾಕ್ಸಿನ್ ಆಗಿರುವುದರಿಂದ ನೀವು ಹೆದರುವ ಅಗತ್ಯವಿಲ್ಲ. ಅಲ್ಲದೇ ಈಗಲೂ ನಾವು ಜಾಗ್ರತೆಯಿಂದ ಇರಬೇಕು. ಮಾಸ್ಕ ಧರಿಸುವುದು ಅಂತರ ಕಾಪಾಡುವುದು ಆಗಾಗ ಕೈ ತೊಳೆಯುವುದನ್ನು ಸರಿಯಾಗಿ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೆಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಆಸ್ಪತ್ರೆಯ ಡಾ. ಪ್ರೇಮಾನಂದ, ಉಡುಪಿ ಜಿಲ್ಲಾ ಲಸಿಕಾ ಅಭಿಯಾನದ ನೋಡಲ್ ಅಧಿಕಾರಿಗಳಾದ ಡಾ. ದಿನಕರ ಶೆಟ್ಟಿ, ಡಾ.ಲತಾ ನಾಯಕ್, ಡಾ ರಶ್ಮಿ, ಡಾ. ಸೋನಿ, ಕುಂದಾಪುರ ರೆಡ್ ಕ್ರಾಸ್‌ನ ಜಯಕರ ಶೆಟ್ಟಿ, ಮತ್ತು ಆಲ್ಡ್ರಿನ್ ಡಿಸೋಜಾ, ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೆಜಿನ ಪ್ರಾಂಶುಪಾಲರಾದ ಡಾ. ಜಿ.ಎಂ.ಗೊಂಡ, ಕಾಲೇಜಿನ ವ್ಯಾಕ್ಸಿನ್ ಡ್ರೈವ್ ಸಂಯೋಜಕರಾದ ಪ್ರೊ. ಸತ್ಯನರಾಯಣ ಉಪಸ್ಥಿತರಿದ್ದರು.

ಸರಕಾರದ ಲಸಿಕಾಕರಣ ಕಾರ್ಯಕ್ರಮ ಕಾಲೇಜು ಆರಂಭವಾಗುವುದಕ್ಕೆ ಮೊದಲು ಮಾಡಿರುವುದು ಶ್ಲಾಘನೀಯ. ದೂರದ ಊರುಗಳಿಂದ ಬರುವವರಿಗೆ ಸಾರಿಗೆ ಅಭಾವವಿರುವ ಕಾರಣ ಬೇಗ ಆರಂಭಿಸಬೇಕಿತ್ತು. ಅನ್ನುವುದು ನನ್ನ ಅಭಿಪ್ರಾಯ – ಬಾಬಣ್ಣ ಹೆಗ್ಡೆ ಪಾಲಕರು

ಕಾಲೇಜನ್ನು ಆರಂಭಿಸಲು ವ್ಯಾಕ್ಸಿನ್ ಮೊದಲ ಹೆಜ್ಜೆ. ಇದರಿಂದ ವಿದ್ಯಾರ್ಥಿಗಳಿಗೆ ದೈರ್ಯದಿಂದ ಕಾಲೇಜಿಗೆ ತೆರಳಲು ಸಾಧ್ಯ. ವ್ಯಾಕ್ಸಿನ್ ಕಾಲೇಜಿನಲ್ಲಿ ದೊರೆತಿದ್ದರಿಂದ ಬೇರೆ ಆಸ್ಪತ್ರೆಗಳಿಗೆ ವ್ಯಾಕ್ಸಿನ್‌ಗಾಗಿ ಅಲೆದಾಟ ತಪ್ಪಿತು. ಅಗತ್ಯವಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ವ್ಯಾಕ್ಸಿನ್ ದೊರಕುವಂತೆ ಸೂಕ್ತ ವ್ಯವಸ್ಥೆ ಮಾಡಿದ ಕಾಲೇಜಿನ ಆಡಳಿತ ಮಂಡಳಿಯವರಿಗೆ ಹಾಗೂ ಜಿಲ್ಲಾ ಮತ್ತು ತಾಲೂಕಾ ಆಸ್ಪತ್ರೆ ಕುಂದಾಪುರ ಇವರಿಗೆ ಧನ್ಯವಾದ – ಅರುಂಧತಿ, ತೃತೀಯ ಬಿ.ಎಸ್ಸಿ

Exit mobile version