Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ರೋಟರಿ ಕ್ಲಬ್‌ನಿಂದ ವೈದ್ಯರಿಗೆ ಗೌರವ ಸಮರ್ಪಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ವತಿಯಿಂದ ಹನ್ನೊಂದು ಜನ ವೈದ್ಯರಿಗೆ ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಗೌರವ ಸಮರ್ಪಣೆ ಸಲ್ಲಿಸಲಾಯಿತು.

ಹಿರಿಯ ಸದಸ್ಯರುಗಳಾದ ಡಾ. ಮಲ್ಲಿ, ಡಾ. ರಾಜೀವ ಶೆಟ್ಟಿ ,ಡಾ. ಕಮಲ್ ಅವರನ್ನು ಅಧ್ಯಕ್ಷರಾದ ರೋಟೇರಿಯನ್ ಶಶಿಧರ ಹೆಗ್ಡೆ ಕಾರ್ಯದರ್ಶಿಗಳಾದ ಕುಮಾರ ಎಸ್. ಕಾಂಚನ್ ಹಾಗೂ ರೋಟರಿ ಮಾಜಿ ಸಹಾಯಕ ರಾಜ್ಯಪಾಲರಾದ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ, ಹಿರಿಯ ವಕೀಲರಾದ ರೋಟೇರಿಯನ್ ಕೆ.ಸಿ ಶೆಟ್ಟಿ ಇವರುಗಳ ಸಮ್ಮುಖದಲ್ಲಿ ಅವರ ಮನೆಯಲ್ಲಿಯೇ ಸನ್ಮಾನಿಸಲಾಯಿತು ಹಾಗೂ ಅದೇ ದಿನ ನಡೆದ ಕ್ಲಬ್ಬಿನ ಸಭೆಯಲ್ಲಿ ರೋಟರಿ ಕುಂದಾಪುರದ ಸದಸ್ಯರಾದ ಪ್ರೋ ಡಾಕ್ಟರ್ ರಾಜರಾಮ್ ಶೆಟ್ಟಿ , ಡಾ. ಹರಿಪ್ರಸಾದ್ ಶೆಟ್ಟಿ, ಪ್ರೋ ಡಾಕ್ಟರ್ ಎಮ್.ಎನ್ ಅಡಿಗ, ಡಾ. ರಾಜೇಂದ್ರ ಶೆಟ್ಟಿ ಹಾಗೂ ಕೋವಿಡ್ ವಾರಿಯರ್ಸ್ ಆಗಿ ಕುಂದಾಪುರದ ಸರಕಾರಿ ಆಸ್ಪತ್ರೆಯಲ್ಲಿ ಅತ್ಯುತ್ತಮ ಸೇವೆಸಲ್ಲಿಸಿದ ಯುವ ವೈದ್ಯರುಗಳಾದ ಡಾ. ನಮಿತ, ಡಾ. ನಿವೇದಿತಾ, ಡಾಕ್ಟರ್ ರಜತ್, ಡಾ. ಆಶಿಥ್, ಡಾ. ವಿಪುಲ್ ಹೀಗೆ ಒಟ್ಟು ಹನ್ನೊಂದು ಜನ ವೈದ್ಯರನ್ನು ರಾಷ್ಟ್ರೀಯ ವೈದ್ಯರ ದಿನದಂದು ಗೌರವ ಸಲ್ಲಿಸಲಾಯಿತು.

ಸನ್ಮಾನಗೊಂಡ ವೈದ್ಯರ ಪರವಾಗಿ ಡಾಕ್ಟರ್ ರಾಜಾರಾಮ್ ಶೆಟ್ಟಿ, ಡಾಕ್ಟರ್ ಅಡಿಗ, ಡಾಕ್ಟರ್ ರಾಜೇಂದ್ರ ಶೆಟ್ಟಿ, ಡಾಕ್ಟರ್ ರಜತ್, ಡಾಕ್ಟರ್ ಆಶಿತ್ ಇವರುಗಳು ನುಡಿಗಳನ್ನಾಡಿದರು.

ಈ ಸಂದರ್ಭ ಅಧ್ಯಕ್ಷರಾದ ಶಶಿಧರ ಹೆಗಡೆ ಅತಿಥಿಗಳನ್ನು ಸ್ವಾಗತಿಸಿದರು ಕಾರ್ಯದರ್ಶಿಗಳಾದ ರೋಟೇರಿಯನ್ ಕುಮಾರ್ ಎಸ್ ಕಾಂಚನ್ ವಂದನಾರ್ಪಣೆ ಸಲ್ಲಿಸಿದರು

Exit mobile version