ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೀದರ್‌ನ ಖ್ಯಾತ ಸಾಹಿತಿ ಡಾ. ಎಂ. ಜಿ. ದೇಶಪಾಂಡೆ ಅವರ ‘ದೇಶಪಾಂಡೆ ಸಾಹಿತ್ಯಿಕ ಸಾಂಸ್ಕೃತಿಕ ಪ್ರತಿಷ್ಠಾನ’ವು ಉಪ್ಪುಂದದ ಕುಂದ ಅಧ್ಯಯನ ಕೇಂದ್ರದ ಸ್ಥಾಪಕ ಅಧ್ಯಕ್ಷ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ, ಅಧ್ಯಾತ್ಮಿಕ ಚಿಂತಕ ಮತ್ತು ಸಾಹಿತಿ ಉಪ್ಪುಂದ ಚಂದ್ರಶೇಖರ ಹೊಳ್ಳರಿಗೆ ಕೊಡಮಾಡಿದ ರಾಜ್ಯಮಟ್ಟದ ‘ಸಾಂಸ್ಕೃತಿಕ ರಾಯಭಾರಿ ಪ್ರಶಸ್ತಿ’ ಹಾಗೂ ಕೆನರಾ ಬ್ಯಾಂಕಿನ ನಿವೃತ್ತ ಅಧಿಕಾರಿ, ರುಡ್ಸೆಟ್ ತರಬೇತಿ ಸಂಸ್ಥೆಯ ಮಾಜಿ ನಿರ್ದೇಶಕ, ಉಪ್ಪುಂದ ರಮೇಶ ವೈದ್ಯರಿಗೆ ಕೊಡಮಾಡಿದ ರಾಜ್ಯಮಟ್ಟದ ’ಸಾಹಿತ್ಯ ಭೂಷಣ ಪ್ರಶಸ್ತಿ’ಯನ್ನು ಪ್ರತಿಷ್ಠಾನದ ಪರವಾಗಿ ಕವಿ ಕೆ. ಪುಂಡಲೀಕ ನಾಯಕ್ ಶನಿವಾರ ಹೊಳ್ಳರ ಮನೆ ‘ಬೆಳ್ಳಿರಥ’ದಲ್ಲಿ ಪ್ರದಾನ ಮಾಡಿದರು.
ಈ ಸಂದರ್ಭ ಗಣೇಶ ಪ್ರಸನ್ನ ಮಯ್ಯ, ಜಗದೀಶ ಉಪ್ಪುಂದ, ಹೊಳ್ಳರ ಹಾಗೂ ವೈದ್ಯರ ಕುಟುಂಬದ ಸದಸ್ಯರು ಇದ್ದರು.