Site icon Kundapra.com ಕುಂದಾಪ್ರ ಡಾಟ್ ಕಾಂ

ಮುನೀರ್ ಬಂಧನ ಖಂಡಿಸಿ ಡಿಫಿ ಪ್ರತಿಭಟನೆ

ಕುಂದಾಪುರ: ಕುಂದಾಪುರ : ಎಮ್.ಆರ್.ಪಿ.ಎಲ್ ಹೋರಾಟದಲ್ಲಿ  ಡಿವೈಎಫ್ಐ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಾಳ್ಳ ಹಾಗೂ ನಾಗರಿಕರರನ್ನು ಸೇರಿ ಬಂಧಿಸಿದ್ದನ್ನು ಖಂಡಿಸಿ ಡಿವೈಎಫ್ಐ ಕಾರ್ಯಕರ್ತರು ಶಾಸ್ತ್ರಿ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಡಿವೈಎಫ್ಐ ಕಾರ್ಯದರ್ಶಿ ರಾಜೇಶ್ ವಡೇರಹೋಬಳಿ ಮಾತನಾಡಿ ನ್ಯಾಯಯುತವಾಗಿ ಹೋರಾಟ ಮಾಡುತ್ತಿರುವ ಮುನೀರ್ ಹಾಗೂ 42 ಮಂದಿ ನಾಗರಿಕರನ್ನು ಸೇರಿ ಬಂಧನ ಮಾಡಿರುವುದು ಖಂಡನೀಯ, ಜನ ಸಾಮಾನ್ಯರ ನೋವು ನಲಿವುಗಳಿಗೆ ಸ್ಪಂದನೆ ಮಾಡಬೇಕಾದ ಸರ್ಕಾರ ಇವತ್ತು ಜನ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ಆಳುವ ಸರ್ಕಾರ ಪೋಲೀಸರನ್ನು ಚೂ ಬಿಟ್ಟು ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದರು.

ಪ್ರತಿಭಟನೆಯಲ್ಲಿ ಸಂತೋಷ್ ಹೆಮ್ಮಾಡಿ,ರವಿ ವಿ.ಎಮ್, ರಾಜ ಬಿಟಿಆರ್, ಸತಿಶ್ ತೆಕ್ಕಟ್ಟೆ, ಗಣೇಶ್ ಕಲ್ಲಾಗರ್, ಅಶೋಕ್ ಹಟ್ಟಿಯಂಗಡಿ, ಶ್ರೀಕಾಂತ್ ಹೆಮ್ಮಾಡಿ, ಅಕ್ಷಯ್ ವಡೇರಹೋಬಳಿ, ಶೀಲಾವತಿ ಉಪಸ್ಥಿತರಿದ್ದರು.

Exit mobile version