Site icon Kundapra.com ಕುಂದಾಪ್ರ ಡಾಟ್ ಕಾಂ

ಪ್ರಾಂಶುಪಾಲ ಸುಧಾಕರ ವಕ್ವಾಡಿಗೆ ಸನ್ಮಾನ

ಕುಂದಾಪುರ: ಇತ್ತೀಚೆಗೆ ಶಾರದಾ ಕಲ್ಯಾಣಮಂಟಪದಲ್ಲಿ ಕೋಟೇಶ್ವರ ವಲಯ ಪದ್ಮಶಾಲಿ ಸಮಾಜ ಸಂಘದ ೨೯ನೇ ವಾರ್ಷಿಕೋತ್ಸದಲ್ಲಿ ಜನಾರ್ಧನ ಶೆಟ್ಟಿಗಾರ್ ಅಧ್ಯಕ್ಷತೆಯಲ್ಲಿ ಹೆಮ್ಮಾಡಿಯ ಕಾಲೇಜಿನ ಪ್ರಾಂಶುಪಾಲರಾದ ವಕ್ವಾಡಿ ಸುಧಾಕರ ಶೆಟ್ಟಿಗಾರ್‌ರವನ್ನು ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಸನ್ಮಾನಿಸಿ ಗೌರವಿಸಲಾಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಸಿವಿಲ್ ಇಂಜಿನಿಯರ್ ನಾರಾಯಣ ಶೆಟ್ಟಿಗಾರ್, ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಉಪಕಾರ್ಯದರ್ಶಿ ಎಮ್.ಸಂಜೀವ ಶೆಟ್ಟಿಗಾರ್, ಕುಂದಾಪುರ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಜಪ್ತಿ ಸತೀಶ್ ಶೆಟ್ಟಿಗಾರ್, ಕುಂದಾಪುರ ಆಹಾರ ಇಲಾಖೆಯ ನಿರೀಕ್ಷ ವಕ್ವಾಡಿ ಚಂದ್ರಶೇಖರ ಶೆಟ್ಟಿಗಾರ್, ವಾಸ್ತುತಜ್ಞ ಬಸವರಾಜ್ ಶೆಟ್ಟಿಗಾರ್, ಮಹಿಳಾ ವೇದಿಕೆಯ ಪ್ರೇಮಾ ಶೆಟ್ಟಿಗಾರ್, ನಿವೃತ್ತ ಶಿಕ್ಷಕಿ ಇಂದಿರಾರವರು ಸಭೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಚಂದ್ರಶೇಖರ ಪದ್ಮಶಾಲಿ ಕಾರ್ಯಕ್ರಮ ನಿರೂಪಿಸಿದರೆ ಉದಯ ಶೆಟ್ಟಿಗಾರ್ ವಂದಿಸಿದರು.

Exit mobile version