Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಕುಂದು ಕೊರತೆಗಳ ಬಗ್ಗೆ ಚರ್ಚೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೊಂಕಣ ರೈಲ್ವೆ ವಿಭಾಗೀಯ ಅಧಿಕಾರಿ ಬಿ ಬಿ ನಿಕ್ಕಮ್ ಮತ್ತು ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯಿಂದ ಕುಂದಾಪುರ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಕುಂದು ಕೊರತೆ ಬಗ್ಗೆ ಚರ್ಚೆ ನಡೆಸಿ ಪರಿಶೀಲಿಸಲಾಯಿತು.

ಕುಂದಾಪುರದಲ್ಲಿ ಪ್ರಯಾಣಿಕರ ಗಣಕಿಕ್ರತ ಸೀಟು ಕಾದಿರಿಸುವಿಕೆ (PRSS ), ನಿಲ್ದಾಣದ ದುರಸ್ತಿ ಕಾರ್ಯ, ವಿಸ್ಟಾಡೋಮ್ ಪ್ರವಾಸಿ ರೈಲು ಕಾರವಾರದ ವರೆಗೂ ವಿಸ್ತರಣೆಗೆ ನಿಲ್ದಾಣ ದಲ್ಲಿ ಹೈ ಮಾಸ್ಕ್ ದೀಪದ ಅಳವಡಿಕೆ, ನೇತ್ರಾವತಿ ನಿಲುಗಡೆ ಮತ್ತು ಬೆಂಗಳೂರು ಕಾರವಾರ ಹಗಲು ರೈಲು ಪುನಃ ಆರಂಭದ ಬಗ್ಗೆ ಚರ್ಚಿಸಲಾಯಿತು.

ಸಮಿತಿ ಅಧ್ಯಕ್ಷ ಗಣೇಶ ಪುತ್ರನ್ ಪ್ರಯಾಣಿಕರ ಕುಂದು ಕೊರತೆ ಬಗ್ಗೆ ವಿವರಸಿದರು. ಹೈ ಮಾಸ್ಕ್ ದೀಪವನ್ನು ಕೂಡಲೇ ಅಳವಡಿಸಲು ನಿಕ್ಕಮ್ ಸ್ಥಳದಲ್ಲೆ ನಿರ್ಣಯ ಕೈಗೊಂಡರು. ಉಳಿದ ವಿಷಯ ಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವದು ಎಂದು ಸಮಿತಿಗೆ ಭರವಸೆ ನೀಡಿದರು.

ಕುಂದಾಪುರ ಸಮಿತಿಯ ಕಾರ್ಯದರ್ಶಿ ಪ್ರವೀಣ್ ಕುಮಾರ್, ತಾಂತ್ರಿಕ ಸಲಹೆಗಾರ ಗೌತಮ್ ಶೆಟ್ಟಿ, ಕೋಶಾಧಿಕಾರಿ ಉದಯ ಭಂಡಾರ್ಕರ ಗೌರವ ಅಧ್ಯಕ್ಷ ಕೆಂಚಿನೂರ್ ಸೋಮಶೇಖರ್ ಶೆಟ್ಟಿ, ಸದಸ್ಯರಾದ ರಾಘವೇಂದ್ರ ಶೇಟ್, ಧರ್ಮ ಪ್ರಕಾಶ್, ನಾಗೇಶ್ ಶೆಣೈ, ಕೋಣಿ ಪಂಚಾಯತ್ ಸದಸ್ಯ ನಾಗರಾಜ್ ಆಚಾರ, ಕಂದಾವರ ಸದಸ್ಯಅಭಿಷೇಕ್, ಕಾರ್ಯದರ್ಶಿ ಸಂಜೀವ, ಹಾಜರಿದ್ದರು.

ಕೊಂಕಣ ರೈಲ್ವೆಯ ಸಿವಿಲ್ ಇಂಜಿನಿಯರ್ ವೆಂಕಟೇಶ್, ಎಲೆಕ್ಟ್ರಿಕಲ್ ಇಂಜಿನಿಯರ್  ಅಭಿಜಿತ್ ಮತ್ತು ಎಲೆಕ್ಟ್ರಿಕಲ್ ಗುತ್ತಿಗೆದಾರ ಭಾಗ್ಯಪ್ರಸಾದ್ ಶೆಟ್ಟಿ ಸಭೆಯಲ್ಲಿ ಹಾಜರಿದ್ದು ಸಮಸ್ಯೆಗಳ ಬಗ್ಗೆ ಕುಲನಂಕುಶ ಪರಿಶೀಲನೆ ನಡೆಸಿದರು.

 

Exit mobile version