Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ವಲಯದ ಗ್ರಾಮೀಣಾಭಿವೃದ್ಧಿ ಯೋಜನೆ ಸ್ವಸಹಾಯ ಸಂಘಗಳಿಗೆ ಲಾಭಾಂಶ ವಿತರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಪ್ರಾಯೋಜಿತ ಸ್ವಸಹಾಯ ಸಂಘಗಳ ವಲಯ ಮಟ್ಟದ ಲಾಭಾಂಶ ವಿತರಣೆ ಕಾರ್ಯಕ್ರಮ ಶಿರೂರಿನಲ್ಲಿ ನಡೆಯಿತು. ಕೇಂದ್ರ ಸಮಿತಿ ಒಕ್ಕೂಟದ ಅಧ್ಯಕ್ಷರಾದ ರಘುರಾಮ ಕೆ. ಪೂಜಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ತಾಲೂಕು ಯೋಜನಾಧಿಕಾರಿಗಳಾದ ಶಶಿರೇಖಾ ಪಿ. ಸಂಘಕ್ಕೆ ಲಾಭಾಂಶದ ಚೆಕ್ ವಿತರಣೆ ಮಾಡಿ, ಯೋಜನೆಯು ನೀಡಿದ ಲಾಭಾಂಶ ನಿಮ್ಮ ಕಷ್ಟಕ್ಕೆ ಬಳಸಿಕೊಳ್ಳಿ ಸಂಘದ ವ್ಯವಹಾರಗಳು ಉತ್ತಮ ರೀತಿಯಲ್ಲಿ ನಡೆಸಿ ಲಾಭ ಪಡೆಯುವಂತೆ ಸಲಹೆ ನೀಡಿದರು. ಸ್ವಸಹಾಯ ಸಂಘದ ಸದಸ್ಯರಿಗೆ ರಾಜ್ಯದಲ್ಲಿ ಒಟ್ಟು 620 ಕೋಟಿ ರೂ. ಲಾಭಾಂಶ ವಿತರಿಸುತ್ತಿದ್ದು ಉಡುಪಿ ಜಿಲ್ಲೆಯಲ್ಲಿ 44 ಕೋಟಿ, ಬೈಂದೂರು ತಾಲೂಕಿನಲ್ಲಿ 8.67 ಕೋಟಿ, ಬೈಂದೂರು ವಲಯದಲ್ಲಿ 60 ಲಕ್ಷ ವಿತರಣೆ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭ ಜನಜಾಗೃತಿ ಸದಸ್ಯರಾದ ವಾಸು ಮೇಸ್ತ, ಶಿರೂರು ಒಕ್ಕೂಟದ ಜೊತೆ ಕಾರ್ಯದರ್ಶಿ ಗೋವಿಂದ ಪೂಜಾರಿ , ವಲಯದ ಮೇಲ್ವಿಚಾರಕರಾದ ರಾಮಚಂದ್ರ ಎಸ್, ಸೇವಾ ಪ್ರತಿನಿಧಿಗಳಾದ ರೇವತಿ , ಸುಜಾತ, ಗೀತಾ ಹಾಜರಿದ್ದರು.

Exit mobile version