ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಯಾರೋ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ, ತಾನು ಮಾಡದ ತಪ್ಪಿಗೆ ಸೌದಿ ಅರೇಬಿಯಾದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕುಂದಾಪುರ ಸಮೀಪದ ಬೀಜಾಡಿ ನಿವಾಸಿ ಹರೀಶ್ ಬಂಗೇರ ಶ್ರೀಘ್ರವೇ ಬಿಡುಗಡೆಗೊಂಡು ತಾಯ್ನಾಡಿಗೆ ಮರಳಲಿದ್ದಾರೆ ಎಂದು ಮಂಗಳೂರು ಅಸೋಸಿಯೆಶನ್ ಸೌದಿ ಅರೇಬಿಯಾ (ಎಂಎಸ್‌ಎ) ಅಶ್ಯಕ್ಷ ಸತೀಶ್ ಕುಮಾರ್ ತಿಳಿಸಿದ್ದಾರೆ.
ಹರೀಶ್ ಬಂಗೇರ ಬಿಡುಗಡೆ ಭಾರತೀಯ ರಾಯಭಾರ ಕಚೇರಿ, ಇಂಡಿಯನ್ ಓವರ್‌ಸೀಸ್ ಪೋರಂ ಸಹಕರಿಸಿದೆ. ಪ್ರತ್ಯಕ್ಷ, ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಅಸೋಸಿಯೆಶನ್ ಕೃತಜ್ಞತೆ ಸಲ್ಲಿಸುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹರೀಶ್ ಬಂಗೇರ ಅವರ ಬಿಡುಗಡೆಯ ನಿರೀಕ್ಷೆಯಲ್ಲಿದ್ದೇವೆ ಎಂದು ಅವರ ಬಂಧನವಾಂದಿನಿಂದ ಈವರೆಗೆ ಬಿಡುಗಡೆಯಾಗಿ ಸಾಕಷ್ಟು ಹೋರಾಟ ನಡೆಸಿಕೊಂಡು ಬಂದಿರುವ ಕೋಟೇಶ್ವರ ಗ್ರಾಪಂ ಸದಸ್ಯ ಅಂಕದಕಟ್ಟೆ ತಿಳಿಸಿದ್ದಾರೆ. ಬಿಜಾಡಿಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಅವರು ಬದುಕಿನ ತುತ್ತಿಗಾಗಿ ಹೊರ ದೇಶಕ್ಕೆ ಹೋದವರು. ಜೈಲು ಸೇರಿದ ಸಂಗತಿ ತಿಳಿದು ಅವರ ಊರಿನಲ್ಲಿರುವ ಪತ್ನಿ ಪುಟ್ಟ ಮಕ್ಕಳು ಸಂಕಷ್ಟಕ್ಕೆ ತುತ್ತಾಗಿದ್ದರು. ಮಾನವೀಯ ನೆಲೆಯಲ್ಲಿ 2019ರ ಡಿ.19ರಂದು ಅವರ ಬಂಧನವಾಗಿದ್ದು, ಅವರ ಬಿಡುಗಡೆಗಾಗಿ ಡಿ.21ರಿಂದ ಈ ತನಕ ಅನೇಕ ರೀತಿಯಲ್ಲಿ ಹೋರಾಟ ನಡೆಸಲಾಗಿದೆ. ಉಡುಪಿ ಮಾನವ ಹಕ್ಕುಗಳ ಹೋರಾಟಗಾರ ರವೀಂದ್ರನಾಥ್ ಶ್ಯಾನುಭಾಗ್, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಆಗಿನ ಪೋಲಿಸ್ ಮಹಾ ನಿರ್ದೇಶಕ ಕಮಲ್‌ಪಂತ್, ಸೌದಿಯಲ್ಲಿನ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳುಯ ದೊಡ್ಡಮಟ್ಟದಲ್ಲಿ ಸಹಕರಿಸಿದ್ದಾರೆ. ಪ್ರಕಣರದ ವಿಚಾರಣೆಯಲ್ಲಿ ಅವರು ನಿರ್ದೋಶಿ ಎಂದು ಸಾಬೀತಾಗಿದೆ. ಅವರು ಬಿಡುಗಡೆ ಸಂಬಂಧಿಸಿದ ಎಲ್ಲ ದಾಖಲೆ ಪತ್ರ ಪೂರ್ಣಗೊಂಡಿದ್ದು ಬಿಡುಗಡೆಯ ನಿರೀಕ್ಷೆಯಲ್ಲಿದ್ದೇವೆ ಎಂದು ಅವರು ತಿಳಿಸಿದರು.
ಹರೀಶ್ ಸುರಕ್ಷಿತವಾಗಿ ತಾಯ್ನಾಡಿಗೆ ಬರಲಿ. ಅವರು ತಪ್ಪು ಮಾಡಿಲ್ಲ ಈಗೇನು ಹೇಳುವುದಿಲ್ಲ. ಕುಟುಂಬ ಸೇರಿದ ಬಳಿಕ ಪ್ರತಿಕ್ರಿಯಿಸುವೆವು. ಅವರ ಬರುವಿಕೆಯ ಕಾತರದಲ್ಲಿದ್ದೇನೆ ಎಂದು ಕುಟುಂಬ ವರ್ಗ ತಿಳಿಸಿದೆ.
ಬಂಧನ ಆಗಿದ್ದು ಯಾಕೆ?
ಪೌರತ್ವ ಮಸೂದೆ ವಿರೋಧಿಸಿ 2019ರ ಡಿಸೆಂಬರ್‌ನಲ್ಲಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯ ಸಂಧರ್ಭ ಹರೀಶ್ ಬಂಗೇರ ಎಸ್. ಎನ್ನುವ ಫೇಸ್‌ಬುಕ್ ಖಾತೆಯಲ್ಲಿ ಧರ್ಮ ನಿಂದನೆ ಮತ್ತು ರಾಜದ್ರೋಹಣ ವಿಷಯ ಇರುವ ಬರಹ ಪೋಸ್ಟ್ ಆಗಿತ್ತು. ಕೂಡಲೇ ಅಲ್ಲಿನ ಯುವಕರು ಹರೀಶ್ ಕಾರ್ಯನಿರ್ವಹಿಸುತ್ತಿರುವ ಕಚೇರಿಗೆ ತೆರಳಿ ತರಾಟೆಗೆ ತಗೆದುಕೊಂಡಿದ್ದರು. ಇದಾದ ಬಳಿಕ ಹರೀಶ್ ಘಟನೆಯ ಬಗ್ಗೆ ಕ್ಷಮೆ ಯಾಚಿಸಿದ್ದ ವಿಡೀಯೋ ಅಪ್‌ಲೋಡ್ ಆಗಿತ್ತು. 2019ರ ಡಿ.19ರಂದು ರಾತ್ರಿ ಫೇಸ್‌ಬುಕ್ ಖಾತೆಯನ್ನು ಡಿಆಕ್ಟಿವೇಟ್ ಮಾಡಿದ್ದರು. ನಂತರ ಬಂಧನಕ್ಕೊಳಪಟ್ಟ ಅವರು ವಿಚಾರಣೆಯಲ್ಲಿ ನಿರ್ದೋಶಿ ಎಂಬುದು ಸಾಬೀತಾಗಿದೆ.