Kundapra.com ಕುಂದಾಪ್ರ ಡಾಟ್ ಕಾಂ

ಬಿಜೂರು ಗ್ರಾ.ಪಂ.ನ ನೂತನ ಕಟ್ಟಡ, ಅಂಗನವಾಡಿ ಕೇಂದ್ರ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಗ್ರಾ.ಪಂ.ನ ನೂತನ ಕಟ್ಟಡ ಹಾಗೂ ಹೊಳೆತೋಟ ಅಂಗನವಾಡಿ ಕಟ್ಟಡದ ಉದ್ಘಾಟನೆ ಸಮಾರಂಭ ನಡೆಯಿತು.

ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಸ್ಥಳೀಯಾಡಳಿತ ಕಾರ್ಯನಿರ್ವಹಿಸಬೇಕು. ಬಿಜೂರು ಶಾಲೆ ರಸ್ತೆಗೆ ಅನುದಾನ ಮಂಜೂರಾಗಿದ್ದು ಶೀಘ್ರದಲ್ಲಿ ಕಾಮಗಾರಿ ನಡೆಯಲಿದೆ. ಈ ಭಾಗದಲ್ಲಿ ಬಾಕಿ ಇರುವ 94ಸಿ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನ ನಡೆಯುತ್ತಿದೆ. ಬಿಜೂರು ಗ್ರಾ.ಪಂ.ನ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಹೆಚ್ಚು ಮನೆಗಳನ್ನು ನೀಡುವ ಭರವಸೆ ನೀಡಿದರು.

ಗ್ರಾ.ಪಂ.ಅಧ್ಯಕ್ಷ ರಮೇಶ ವಿ.ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಹೆರಿಯಣ್ಣ ರಾವ್ ಹೊಸ್ಕೋಟೆ, ಉದ್ಯಮಿ ಗೋವಿಂದಬಾಬು ಪೂಜಾರಿ ಬಿಜೂರು, ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ ಕುಮಾರ್ ಶೆಟ್ಟಿ, ರಾಜ್ಯ ಯೋಜನಾ ಆಯೋಗದ ಸದಸ್ಯೆ ಪ್ರಿಯದರ್ಶಿನಿ ದೇವಾಡಿಗ, ಜಿ.ಪಂ.ಮಾಜಿ ಸದಸ್ಯೆ ಗೌರಿ ದೇವಾಡಿಗ, ಖಂಬದಕೋಣೆ ರೈತರ ಸೇ.ಸ. ಸಂಘದ ನಿರ್ದೇಶಕರಾದ ರಘರಾಮ ಶೆಟ್ಟಿ, ಮಂಜು ದೇವಾಡಿಗ, ಕಂಚಿಕಾನ್ ಪುಂಡಲೀಕ ಕಿಣಿ, ಅಣ್ಣಪ್ಪ ಶೇರಿಗಾರ್ ಬಿಜೂರು, ಅಣ್ಣಪ್ಪ ನಾಯ್ಕ್ ಬವಳಾಡಿ, ಗ್ರಾ.ಪಂ.ಉಪಾಧ್ಯಕ್ಷೆ ಶ್ರೀಮತಿ ಶೆಟ್ಟಿ, ಸದಸ್ಯರಾದ ವಿರೇಂದ್ರ ಶೆಟ್ಟಿ, ರಾಜೆಂದ್ರ ಬಿಜೂರು, ಗಂಗಾಧರ ದೇವಾಡಿಗ, ರಂಜಿತ್, ಲೋಲಾಕ್ಷಿ ದೇವಾಡಿಗ ,ಲಕ್ಷ್ಮೀ, ರಾಘವೇಂದ್ರ ಗಾಣಿಗ, ಅಶೋಕ ಪೂಜಾರಿ, ರಾಘವೇಂದ್ರ ಕೆ., ಚಣ್ಣಮ್ಮ, ಶಾಂತ ದೇವಾಡಿಗ, ಸೀತಾ, ಸರೋಜ ದೇವಾಡಿಗ, ಗೀರೀಶ ದೇವಾಡಿಗ, ರೇವತಿ, ಉಪಸ್ಥಿತರಿದ್ದರು.

ಗ್ರಾ.ಪಂ.ಮಾಜಿ ಉಪಾಧ್ಯಕ್ಷೆ ಚಂದು, ಗುತ್ತಿಗೆದಾರ ಪ್ರವೀಣ ಪೂಜಾರಿ, ಮಂಜುನಾಥ ಶೇರಿಗಾರ್, ಗ್ರಾ.ಪಂ.ಗೆ ಜಾಗ ದಾನ ನೀಡಿದ ವೆಂಕಟ ಪೂಜಾರಿ ಇವರನ್ನು ಸಮ್ಮಾನಿಸಲಾಯಿತು.

ಅಭಿವೃದ್ಧಿ ಅಧಿಕಾರಿ ಸತೀಶ ತೋಳಾರ್ ಸ್ವಾಗತಿಸಿದರು. ಶಿಕ್ಷಕರಾದ ಸುಬ್ರಹ್ಮಣ್ಯ ಉಪ್ಪುಂದ, ರಾಘವೇಂದ್ರ ನಿರೂಪಿಸಿದರು. ಕಾರ್ಯದರ್ಶಿ ನಾಗರಾಜ ದೇವಾಡಿಗ ವಂದಿಸಿದರು.

ಕುಡಿಯುವ ನೀರಿನ ಸಮಸ್ಯೆಗೆ ರೂ.400 ಕೋಟಿ ಅನುದಾನ ಮಂಜೂರಾಗಿದ್ದು ಪ್ರತಿ ಮನೆಗೂ ಶುದ್ಧ ನೀರು ನೀಡುವ ಯೋಜನೆ ಕಾರ್ಯಗತವಾಗಲಿದೆ. ರೂ.100 ಕೋಟಿ ಇದರ ನಿರ್ವಹಣೆಗಾಗಿ ಮೀಸಲಿಡಲಾಗಿದೆ. – ಶಾಸಕರು ಬಿ.ಎಂ.ಸುಕುಮಾರ್ ಶೆಟ್ಟಿ

Exit mobile version