Kundapra.com ಕುಂದಾಪ್ರ ಡಾಟ್ ಕಾಂ

ತಾಲೂಕಿನ ಚರ್ಚುಗಳಲ್ಲಿ ಪವಿತ್ರ ಮೊಂತಿ ಫೆಸ್ಟ್ ಆಚರಣೆ

ಕುಂದಾಪುರ: ತಾಲೂಕಿನ ಕ್ರೈಸ್ತ ಭಾಂದವರು ತಮ್ಮ ತಮ್ಮ ಚರ್ಚಿನಲ್ಲಿ ಕ್ರೈಸ್ತರ ಪವಿತ್ರ ಹಬ್ಬವಾದ ಮೊಂತಿಫೆಸ್ತ್ ( ಹೊಸ್ತು ) ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.

ತಾಲೂಕಿನ ಕುಂದಾಪುರ, ಬಸ್ರೂರು, ತಲ್ಲೂರು, ನಾಡ, ತ್ರಾಸಿ, ಬೈಂದೂರು ಸೇರಿದಂತೆ 11 ಚರ್ಚ್ ಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆಗಳು ನೆರವೇರಿದವು.

ಬೈಂದೂರು ಚರ್ಚಿನ ಧರ್ಮಗುರುಗಳಾದ ರೆ.ಫಾ.ರೊನಾಲ್ಡ್ ಮಿರಾಂದ್ ಹಾಗೂ ಹೋಲಿಕ್ರಾಸ್ ಸಂಸ್ಥೆ  ಕಟಪಾಡಿ ಇದರ ಸಂಚಾಲಕರಾದ ರೆ.ಫಾ. ರಾಯಲ್ ನಜ್ರೆತ್ ರವರ ನೇತೃತ್ವದಲ್ಲಿ ಮೊಂತಿಫೆಸ್ತ್ ಹಬ್ಬವನ್ನು ಆಚರಿಸಲಾಯಿತು. ಚರ್ಚಿನ ಧರ್ಮಗುರುಗಳಾದ ರೊನಾಲ್ಡ್ ಮಿರಾಂದ್ ಎಲ್ಲಾ ಕ್ರೈಸ್ತ ಬಾಂಧವರಿಗೂ ಆರ್ಶೀವಚನ ನೀಡಿದರು.  ಕೊನೆಯಲ್ಲಿ ಎಲ್ಲರಿಗೂ ಸಿಹಿ ವಿತರಣೆ ಮತ್ತು ತೆನೆ ಹಾಗೂ ಕಬ್ಬನ್ನು ವಿತರಿಸಲಾಯಿತು.

 ಚಿತ್ರಗಳು – ಲಾರೆನ್ಸ್ ಫೆರ್ನಾಂಡಿಸ್

Byndoor church Monti fest27

Exit mobile version