ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಹಿರಿಯ ನಾಗರಿಕರ ವೇದಿಕೆಯ ಮಾಸಿಕ ಸಭೆಯು ವೇದಿಕೆಯ ಅಧ್ಯಕ್ಷರಾದ ಗೋವಿಂದ ಎಮ್. ನಾಯ್ಕನಕಟ್ಟೆ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ವೇದಿಕೆಯ ಸದಸ್ಯ ಹಿರಿಯ ಸಹಕಾರಿ ಹಾಗೂ ಲೇಖಕ ಕೆ. ಪುಂಡಲೀಕ ನಾಯಕ್ ಅವರು ಮಾತನಾಡಿ, ನಿವೃತ್ತಿಯ ನಂತರ ಬದುಕನ್ನು ಹೇಗೆ ಸುಗಮವಾಗಿ ಸಾಗಿಸಬಹುದೆಂದು, ಮತ್ತು ನಿವೃತ್ತಿಯ ನಂತರದ ತನ್ನ ಸಾಹಿತ್ಯ ಕ್ಷೇತ್ರದ ಬದುಕನ್ನು ವಿವರಿಸಿದರು.
ಖ್ಯಾತ ಸಾಹಿತಿ ಪುರಷೋತ್ತಮ ಬಿಳಿಮಲೆ ಅವರ ‘ಕಾಗೆ ಮುಟ್ಟದ ನೀರು’ ಎಂಬ ಆತ್ಮಕಥನದ ಕಿರುಪರಿಚಯವನ್ನು ಮಾಡಿದರು. ಐವತ್ತರ ದಶಕದಲ್ಲಿ ಬಂಟಮಲೆಯ ಕಗ್ಗಾಡಿನ ನಡುವೆ ಕುಗ್ರಾಮವೊಂದರಲ್ಲಿ ಹುಟ್ಟಿದ ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಬರೇ ಭಾಷೆ ಮತ್ತು ಜೀವನ ಪ್ರೇಮದಿಂದಲೇ ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ಪುರುಷೋತ್ತಮ ಬಿಳಿಮಲೆಯವರು ಜಿವಂತ ಸಾಕ್ಷಿ ಎಂದರು.
ಕೊಣಿ ವೆಂಕಟೇಶ ನಾಯಕ್ ಅವರು ಸ್ವರಚಿತ ಪುಟ್ಟ ಕವನದೊಂದಿಗೆ ದಿನಕರ ದೇಸಾಯಿಯವರ ಕೆಲವು ಚುಟುಕುಗಳನ್ನು ಹಾಡಿದರು. ಸದಸ್ಯರು ವಿಚಾರ ವಿನಿಮಯ ಮಾಡಿಕೊಂಡರು.
ಕಾರ್ಯದರ್ಶಿ ಸಂಜೀವ ಆಚಾರ್ ಅವರು ಗತಸಭೆಯ ವರದಿ ಓದಿದರು, ನಿವೃತ್ತ ಶಿಕ್ಷಕಿ ಶಾರದಾ ಐ. ನಾರಾಯಣ್, ರಾಜೀವಿ ಎಮ್. ಗೋವಿಂದ್ ಹಿರಿಯ ಮಹಿಳಾ ಸದಸ್ಯರನ್ನು ಪುಷ್ಪ ನೀಡಿ ವೇದಿಕೆಗೆ ಸೇರ್ಪಡೆ ಮಾಡಲಾಯಿತು. ಅವರು ತಮ್ಮ ಪರಿಚಯ ಮತ್ತು ಅನುಭವಗಳನ್ನು ಹಂಚಿಕೊಂಡರು. ಇನ್ನುಮುಂದೆ ಹೆಚ್ಚಿನ ಮಹಿಳಾ ಸದಸ್ಯೆಯರನ್ನು ಹಿರಿಯ ನಾಗರಿಕರಿಗೆ ವೇದಿಕೆಗೆ ಸೇರ್ಪಡೆ ಮಾಡಿಕೊಳ್ಳುವದಕ್ಕೆ ಚರ್ಚಿಸಲಾಯಿತು.
ವೇದಿಕೆಯಲ್ಲಿ ನಾಗಯ್ಯ ಶೇರೆಗಾರ್ ಅಧ್ಯಕ್ಷರು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿರು. ಉಪಾಧ್ಯಕ್ಷ ಎಂ.ಶ್ರೀನಿವಾಸ, ನಿವೃತ್ತ ಶಿಕ್ಷಕ ತಿಮ್ಮಪ್ಪಯ್ಯ ವಂದಿಸಿದರು.