Site icon Kundapra.com ಕುಂದಾಪ್ರ ಡಾಟ್ ಕಾಂ

ಸುಭಾಸ್ ಖಾರ್ವಿ ಅವರ ಗುಲಾಯ್ನ್ ಬೇರ್ ಸಿಂಡ್ರೋಮ್ ಕಾಯಿಲೆಯ ಚಿಕಿತ್ಸೆಗೆ ಬೇಕಿದೆ ನೆರವು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಮರವಂತೆ ಜನತಾ ಕಾಲನಿ ನಿವಾಸಿ ಶಂಕರ ಖಾರ್ವಿ-ಪಾರ್ವತಿ ದಂಪತಿಯ ಪುತ್ರ ಸುಭಾಸ್ ಖಾರ್ವಿ(28) ಗುಲಾಯ್ನ್ ಬೇರ್ ಸಿಂಡ್ರೋಮ್ ಕಾಯಿಲೆಯಿಂದ ಬಳಲುತಿದ್ದು, ಅವರ ಚಿಕಿತ್ಸೆಗೆ ಮಾನವೀಯ ನೆರವಿನ ಅಗತ್ಯವಿದೆ.

ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿದ್ದಾರೆ (ಆಸ್ಪತ್ರೆ ಸಂಖ್ಯೆ: 03444242). ಚಿಕಿತ್ಸೆಗೆ ರೂ 4 ಲಕ್ಷ ವೆಚ್ಚವಾಗುವುದೆಂದು ಆಸ್ಪತ್ರೆಯ ನ್ಯೂರೊಲಜಿ ವಿಭಾಗದ ಮುಖ್ಯಸ್ಥೆ ಡಾ. ಅಪರ್ಣಾ ಪೈ ದೃಢೀಕರಿಸಿದ್ದಾರೆ.

ಸುಭಾಸ್ ಅವರ ತಂದೆ ಹೃದ್ರೋಗಕ್ಕೆ ಮತ್ತು ತಾಯಿ ಪಾರ್ವತಿ ಥೈರಾಯ್ಡ್ ಸಂಬಂಧಿ ಕಾಯಿಲೆಗೆ ನಿರಂತರ ಔಷಧಿ ಸೇವಿಸುತ್ತಿದ್ದಾರೆ. ಕೇವಲ ದಿನದ ದುಡಿಮೆಯಿಂದ ಬದುಕಬೇಕಾದ ಕುಟುಂಬ ಸುಭಾಸ್ ಚಿಕಿತ್ಸೆಗೆ ಹಣ ಹೊಂದಿಸಲು ಸಾದ್ಯವಾಗದೇ ಅವರು ದಾನಿಗಳ, ಸಂಘಟನೆಗಳ ನೆರವು ಯಾಚಿಸಿದ್ದಾರೆ.

ಸುಭಾಸ್ ಅವರಿಗೆ ಸಹಾಯ ಮಾಡಲಿಚ್ಚಿಸುವವರು ಪಾರ್ವತಿ ಹೆಸರಿನಲ್ಲಿ ಮರವಂತೆ ಕೆನರಾ ಬ್ಯಾಂಕ್‌ನ (ಐಎಫ್‌ಎಸ್‌ಸಿ ಕೋಡ್: ಸುಭಾಸ್ ಅವರಿಗೆ ಸಹಾಯ ಮಾಡಲಿಚ್ಚಿಸುವವರು ಪಾರ್ವತಿ ಹೆಸರಿನಲ್ಲಿ ಮರವಂತೆ ಕೆನರಾ ಬ್ಯಾಂಕ್‌ನ(ಐಎಫ್‌ಎಸ್‌ಸಿ ಕೋಡ್: 0ಸಿಎನ್‌ಆರ್‌ಬಿ0010282) 02822250002001 ಸಂಖ್ಯೆಯ ಉಳಿತಾಯ ಖಾತೆಗೆ ಜಮೆ ಮಾಡಬಹುದು.

Exit mobile version