Kundapra.com ಕುಂದಾಪ್ರ ಡಾಟ್ ಕಾಂ

ಡಾ. ಬಿ. ಬಿ. ಹೆಗ್ಡೆ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಡಾ. ಬಿ. ಬಿ. ಪ್ರಥಮ ದರ್ಜೆ ಕಾಲೇಜಿನ ಎನ್ಸಿಸಿ ಘಟಕ ಆಯೋಜಿಸಿದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಕುಂದಾಪುರ ಮೂಲದ ಮಾಜಿ ಸೈನಿಕ ರವಿಚಂದ್ರ ಶೆಟ್ಟಿ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸೈನ್ಯದ ಸಿಕ್ಕಿಂ ಮತ್ತು ಸಿಯಾಚಿನ್ ದಿನಗಳನ್ನು ನೆನಪಿಸಿ ರೋಮಾಂಚನಗೊಳಿಸಿದರು. ಸೈನ್ಯಕ್ಕೆ ಸೇರ ಬಯಸುವ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುವುದಾಗಿಯೂ ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀಕಾಂತ್ ಶೆಟ್ಟಿ ಕಾರ್ಕಳ ಮಾತನಾಡಿ, ಕಾರ್ಗಿಲ್ ಯುದ್ಧದ ಆ ಸಂದರ್ಭಗಳು ಮತ್ತು ಮತ್ತು ಆಗಿನ ದೇಶದ ಪರಿಸ್ಥಿತಿ ಬಗ್ಗೆ ವಿವರಿಸಿದರು. ಆಪರೇಶನ್ ಸಫೇದ್ ಸಾಗರ್, ಆಪರೇಶನ್ ತಲ್ವಾರ್, ಆಪರೇಶನ್ ವಿಜಯ್ ಹೀಗೆ ಕ್ಷಿಪ್ರಗತಿಯಲ್ಲಿ ವಿರೋಧಿಗಳನ್ನು ಮೆಟ್ಟಿನಿಂತ ಭಾರತ ಸೈನ್ಯದ ಪರಾಕ್ರಮ, ಯೋಗಿಂದರ್ ಸಿಂಗ್ ಯಾದವ್, ಸೌರಭ್ ಕಾಲಿಯಾ ಹೀಗೆ ಅನೇಕ ಸೈನಿಕರ ಸಾಹಸಗಾಥೆಗಳನ್ನು ಸ್ಮರಿಸಿದರು.

ದೇಶ ಭಕ್ತಿ ಮತ್ತು ದೇಶಪ್ರೇಮ ಪ್ರತಿದಿನದ ನಮ್ಮ ಜೀವನದಲ್ಲಿ ಸದಾ ಜಾಗೃತವಾಗಿರಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಎನ್‌ಸಿಸಿ ಕಮಾಂಡರ್ಗಳಾದ ಪ್ರಥ್ವಿರಾಜ್ ಮತ್ತು ನವ್ಯಶ್ರೀ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕುಮಾರಿ ದೀಕ್ಷಾ ಪ್ರಾರ್ಥನೆ ಮಾಡಿದರು, ಎನ್‌ಸಿಸಿ ಅಧಿಕಾರಿ ಶಿವರಾಜ್.ಸಿ. ಸ್ವಾಗತಿಸಿದರು, ಪ್ರಾಧ್ಯಾಪಕಿ ಸೌಮ್ಯ ಕುಂದರ್ ನಿರೂಪಿಸಿ ವಂದಿಸಿದರು.

Exit mobile version