Kundapra.com ಕುಂದಾಪ್ರ ಡಾಟ್ ಕಾಂ

ಸೇನೇಶ್ವರ ದೇವಸ್ಥಾನದ ಶಿಲ್ಪಕಲಾ ವೈಭವ

ಬೈಂದೂರಿನ ಪೇಟೆಯಲ್ಲಿರುವ ಅಧಿದೇವ ಶ್ರೀ ಸೇನೇಶ್ವರ ದೇವಸ್ಥಾನ ಧಾರ್ಮಿಕ ಪಾವಿತ್ರ್ಯ ಕ್ಷೇತ್ರ ಮಾತ್ರವಲ್ಲದೇ ಪ್ರವಾಸಿ ತಾಣವೂ ಹೌದು. 11ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರ ಸಾಮಂತರಾಗಿದ್ದ ಸೇನವಾರ ಅರಸರು ಈ ದೇವಾಲಯವನ್ನು ನಿರ್ಮಿಸಿದರೆಂದು ಇತಿಹಾಸ ತಿಳಿಸುತ್ತದೆ. ದೇವಾಲಯದ ಗರ್ಭಗುಡಿ, ಸುಕನಾಸಿ, ಬಸವ ಮಂಟಪ ಸಂಪೂರ್ಣ ಶಿಲೆಯಿಂದಲೇ ನಿರ್ಮಿತವಾಗಿದೆ. ಇಲ್ಲಿನ ಅದ್ಬುತವೆನಿಸುವ ಶಿಲ್ಪಗಳ ಚಿತ್ತಾರ ಎಂಥವರನ್ನೂ ಬೆರಗುಗೊಳಿಸುತ್ತದೆ. ಚಾಲುಕ್ಯರ ದೇವಾಲಯಗಳ ಶೈಲಿಯಲ್ಲಿಯೇ ಈ ದೇವಾಲಯ ನಿರ್ಮಾಣಗೊಂಡಿದ್ದು ಇಲ್ಲಿನ ಪ್ರತಿ ಕೆತ್ತನೆಯೂ ಚಿತ್ತಾಕರ್ಷಕವಾದುದು.

ದೇವಾಲಯದ ನಂದಿ ಮಂಟಪ, ಲೇಪಾಕ್ಷಿ, ಸುಕನಾಸಿಯ ಜಾಲಂದ್ರಗಳ ಮಧ್ಯದಲ್ಲಿರುವ ಮಕರ ತೋರಣ ಇವೆಲ್ಲರ ನಡುವೆ ವಿರಾಜಿಸುವ ಶ್ರೀ ಸೇನೇಶ್ವರನ ಸನ್ನಿಧಾನ ಭಕ್ತಿ ಭಾವನೆಯನ್ನು ತುಂಬುವುದರೊಂದಿಗೆ ಕಲಾಪ್ರೀಯರ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತದೆ.

Exit mobile version