Kundapra.com ಕುಂದಾಪ್ರ ಡಾಟ್ ಕಾಂ

ಪುರಸಭೆ ಯುಜಿಡಿ ಕಾಮಗಾರಿಯ ಜಾಗ ಖರೀದಿ ಅಕ್ರಮ ತನಿಕೆಯಾಗಲಿ: ಕೇಶವ ಭಟ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಪುರಸಭೆಯ ಯುಜಿಡಿ ಕಾಮಗಾರಿ ವೆಟ್ವೆಲ್ ನಿರ್ಮಿಸಲು ನಿರುಪಯುಕ್ತ ಹೊಳೆ ಬದಿ ಖರೀದಿಸಿರುವ ಸರ್ಕಾರವು ದುಪ್ಪಟ್ಟು ಹಣ ಪಾವತಿಸಿದೆ. ಜಾಗದ ನಷ್ಟ ಪರಿಹಾರ ಎಂದು ತೋರಿಸಿ ಒಟ್ಟು 95 ಲಕ್ಷ ಜಾಗದ ಮಾಲೀಕರಿಗೆ ಸಂದಾಯ ಮಾಡಿರುವ ಹಿಂದೆ ಅಕ್ರಮ ನಡೆದಿರುವ ಶಂಕೆ ಇದೆ ಎಂದು ಪುರಸಭೆಯ ಮಾಜಿ ಸದಸ್ಯ ಕೇಶವ ಭಟ್ ಆರೋಪಿಸಿದ್ದಾರೆ.

ಪುರಸಭೆ ಸದಸ್ಯರ ಗಮನಕ್ಕೆ ತರದೇ ದುಪ್ಪಟ್ಟು ಹಣ ನೀಡಿ ಜಾಗ ಖರೀದಿಯ ಮಾಡಿರುವ ಹಿಂದಿನ ಮರ್ಮವೇನು? ಈ ಕುರಿತು ಸಮಗ್ರ ತನಿಖೆ ನಡೆಸಬೇಕು, ಸಾರ್ವಜನಿಕರ ತೆರಿಗೆ ಹಣ ಈ ರೀತಿಯಾಗಿ ಫೋಲಾಗಬಾರದು ಎಂದು ಧ್ವನಿ ಎತ್ತಿದ್ದರೂ ಯಾಕೆ?

ಕೋವಿಡ್ ಸಂದರ್ಭದಲ್ಲಿ ತರಾತುರಿಯಲ್ಲಿ ಜಾಗ ಖರೀದಿ ಮಾಡಿ ಪುರಸಭೆ ಸದ್ಯಸರ ಗಮಕ್ಕೆ ತರದೇ, ರಿಜಿಸ್ಟರ್ ಮಾಡಿದರ ಹಿಂದಿನ ಗುಟ್ಟೇನು? ಕೇವಲ ದುಪ್ಪಟ್ಟು ಹಣ ನೀಡಿ ಜಾಗ ಖರೀದಿಯಾಗಿದೆ ಅನ್ನುವುದರ ಬಗ್ಗೆ ಆಡಳಿತ ಪಕ್ಷದ ಸದಸ್ಯ ಗಿರೀಶ್ ದೇವಾಡಿಗ ಹಾಗೂ ಸ್ವಪಕ್ಷದವರು ಧ್ವನಿ ಎತ್ತಿದ್ದು ಶ್ಲಾಘನೀಯ. ಇದು ಮುಗಿದಿಲ್ಲ ಈ ವೆಟ್ ವೆಲ್ ಗೆ ದಾರಿಗಾಗಿ ಬಡವನ ಪಟ್ಟ ಜಾಗವನ್ನು ಸಾರ್ವಜನಿಕರ ದಾರಿ ಎಂದು ಬಿಂಬಿಸಿದ್ದು ಎಷ್ಟು ಸರಿಯೆ. ಪುರಸಭೆ ಇವರಿಂದ ದಾನಪತ್ರ ಪಡೆದಿದೆಯೇ? ನ್ಯಾಯಲಯ ಹದ್ದು ಬಸ್ತಿನ ಅಡಿಯಲ್ಲಿ ಪಟ್ಟ ಭೂಮಿಯ ಸರ್ವೇ ಮಾಡಿ ಹಾಕಿದ ಕಲ್ಲು ಕಂಬಗಳು ಭೂಮಿ ರಿಜಿಸ್ಟರ್ ಆಗುವ ಮೊದಲೇ ರಾತ್ರೋ ರಾತ್ರಿ ಮಾಯವಾಗಿದ್ದರ ಹಿಂದೆ ಯಾರ ಕೈವಾಡವಿದೆ? ಈ ವೆಟ್ ವೆಲ್ ಗೆ ಸಾರ್ವಜನಿಕರ ವಿರೋಧವಿದ್ದರೂ, ಪ್ರತಿಭಟನೆ ನಡೆದರೂ ಈ ಜಾಗದಲ್ಲೇ ವೆಟ್ ವೆಲ್ ಆಗಲೇಬೇಕು ಏನುವುದಾದರ ಹಿಂದಿನ ಗುಟ್ಟೇನು? ದೇವಸ್ಥಾನ ಆಡಳಿತ ಮಂಡಳಿ ವೆಟ್ ವೆಲ್ ಗೆ ವಿರೋಧ ವ್ಯಕ್ತಪಡಿಸಿದರು ಈ ಅಭಿವೃದ್ಧಿ ಕಾರ್ಯ ಎಂದು ಮುಂಗೈ ಬೆಣ್ಣೆ ಸವರು ಕೆಲಸ ಆಗಿದ್ದರು ಏಕೆ?

ಈ ಎಲ್ಲಾ ವಿದ್ಯಮಾನಗಳನ್ನು ಗಮನಿಸಿದಾಗ ಇದರ ಹಿಂದೆ ದೊಡ್ಡ ಲಾಭಿ ನಡೆದಿದ್ದೆ ಎನ್ನುವುದರಲ್ಲಿ ಸಂಶಯವಿಲ್ಲ. ಇದನ್ನು ಎಸಿಬಿ ತನಿಖೆಗೆ ಒಳಪಡಿಸಿ ನ್ಯಾಯ ದೊರಕಿಸಬೇಕೆಂದು ಅವರು ಅಗ್ರಹಿಸಿದ್ದಾರೆ.

Exit mobile version