Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಲಯನ್ಸ್ ಕ್ಲಬ್‌ನ ಅಧ್ಯಕ್ಷರಾಗಿ ಬಿ. ರಾಧಾಕೃಷ್ಣ ನಾಯಕ್ ಪದಗ್ರಹಣ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಲಯನ್ಸ್ ಕ್ಲಬ್ನ 2021-22 ನೇ ಸಾಲಿನ ನೂತನ ಪಧಾದಿಕಾರಿಗಳ ಪದಗ್ರಹಣ ಕಾರ್ಯಕ್ರಮಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಕೋಯಾಕುಟ್ಟಿ ಸಭಾಂಗಣದಲ್ಲಿ ನಡೆಯಿತು.

ಲಯನ್ಸ್ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಬಿ. ರಾಧಾಕೃಷ್ಣ ನಾಯಕ್ ಅಧಿಕಾರ ಸ್ವೀಕರಿಸಿದರು.

ಪದಗ್ರಹಣ ನೆರವೇರಿಸಿ ಮಾತನಾಡಿದ ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಪ್ರಕಾಶ್ ಟಿ ಸೋನ್ಸ್ ಸಮಾಜ ಸೇವೆ ಮಾಡುವವರಿಗೆ ಹಲವು ಆಯ್ಕೆಗಳು ಇರುತ್ತದೆ. ನಮ್ಮ ಮನಸ್ಥಿತಿಗೆ ಒಪ್ಪುವಂತಹ ಆಯ್ಕೆಗಳನ್ನು ಮಾಡಿಕೊಳ್ಳುವುದರಿಂದ ಸೇವಾ ಸಂತೃಪ್ತಿ ಪಡೆಯಲು ಸಾಧ್ಯ. ಪ್ರತಿಯೊಬ್ಬ ಲಯನ್ಸ್ ಸದಸ್ಯರಲ್ಲಿಯೂ ಈ ರೀತಿಯ ಸಂತೃಪ್ತಿ ಇರಬೇಕು ಎಂದರು.

ಈ ಸಂದರ್ಭ ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಜಯಕರ ಶೆಟ್ಟಿ ಸುಪ್ರೀಮ್, ಮಂಜುನಾಥ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಎಂ. ವಿ. ಕುಲಾಲ್ ಲಯನ್ಸ್ ವಿಭಾಗೀಯ ಸಭಾಪತಿ ಕೆದೂರು ಸೀತಾರಾಮ ಶೆಟ್ಟಿ, ವಲಯ ಸಭಾಪತಿ ಅಶೋಕ ಶೆಟ್ಟಿ, ನಿಕಟ ಪೂರ್ವ ಅಧ್ಯಕ್ಷ ಕೆ. ಚಂದ್ರಶೇಖರ ಕಲ್ಪತರು. ನಿಕಟ ಪೂರ್ವ ಕಾರ್ಯದರ್ಶಿ ಡಾ. ರಾಜೇಂದ್ರ ಕೆ, ನಿಕಟ ಪೂರ್ವ ಕೋಶಾಧಿಕಾರಿ ಕಿರಣ್ ಕುಮಾರ, ನೂತನ ಕೋಶಾಧಿಕಾರಿ ಡಾ. ರವೀಂದ್ರ, ಉಪಸ್ಥಿತರಿದ್ದರು.

ಚಂದ್ರಶೇಖರ ಕಲ್ಪತರು ಸ್ವಾಗತಿಸಿದರು. ಡಾ. ಶಿವಕುಮಾರ್ ಹಾಗೂ ವಿನಯ ಪ್ರಭು ನಿರೂಪಿಸಿದರು. ಪ್ರಜ್ಞೇಶ್ ಪ್ರಭು ವಂದಿಸಿದರು.

Exit mobile version