Kundapra.com ಕುಂದಾಪ್ರ ಡಾಟ್ ಕಾಂ

ಸುರಭಿ ಕಥಾ ಓದು: ಗುಲಾಬಿ ಟಾಕೀಸ್ ಮತ್ತು ಸಣ್ಣ ಅಲೆಗಳು ಕಥೆ ವಾಚನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಇಲ್ಲಿನ ರೋಟರಿ ಭವನದಲ್ಲಿ ಸುರಭಿ ರಿ. ಬೈಂದೂರು ಸಂಸ್ಥೆಯ ನೇತೃತ್ವದಲ್ಲಿ ಕಥಾಓದು ಕಾರ್ಯಕ್ರಮ ಇತ್ತಿಚಿಗೆ ಜರುಗಿತು.

ಸಾಹಿತಿ ವೈದೇಹಿ ಅವರ ಗುಲಾಬಿ ಟಾಕೀಸ್ ಮತ್ತು ಸಣ್ಣ ಅಲೆಗಳು ಕಥೆಯನ್ನು ಕೀರ್ತಿ ಭಟ್ ಉಪ್ಪುಂದ ವಾಚಿಸಿದರು. ಬಳಿಕ ಸುರಭಿ ಸದಸ್ಯರು ಹಾಗೂ ಕ್ಲಬ್ ಹೌಸ್ ಮೂಲಕ ಸಂವಾದ ನಡೆಯಿತು.

ಈ ಸಂದರ್ಭ ಸುರಭಿ ಅಧ್ಯಕ್ಷ ನಾಗರಾಜ ಪಿ. ಯಡ್ತರೆ, ಕಾರ್ಯದರ್ಶಿ ಭಾಸ್ಕರ ಬಾಡ, ಖಜಾಂಚಿ ಸುರೇಶ್ ಹುದಾರ್, ನಿರ್ದೇಶಕ ಸುಧಾಕರ ಪಿ. ಬೈಂದೂರು ಮೊದಲಾದವರು ಉಪಸ್ಥಿತರಿದ್ದರು.

Exit mobile version