Kundapra.com ಕುಂದಾಪ್ರ ಡಾಟ್ ಕಾಂ

ಕರಾವಳಿ ಕಾವಲು ಪೊಲೀಸ್ ಸಹಾಯಕ ಉಪನಿರೀಕ್ಷಕ ನಿತ್ಯಾನಂದ ಅವರಿಗೆ ಬೀಳ್ಕೊಡುಗೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ:
ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಸಹಾಯಕ ಉಪನಿರೀಕ್ಷಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ನಿತ್ಯಾನಂದ ಅವರನ್ನು ಸಿಬ್ಬಂದಿಗಳ ಪರವಾಗಿ ಬೀಳ್ಕೊಡಲಾಯಿತು.

ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಠಾಣೆಯ ಇನ್ಸ್‌ಪೆಕ್ಟರ್ ನಂಜಪ್ಪ ಅವರು ಸಿಬ್ಬಂದಿಗಳ ಪರವಾಗಿ ನಿತ್ಯಾನಂದ ಅವರನ್ನು ಗೌರವಿಸಿ ಬೀಳ್ಕೊಟ್ಟರು.

ಪೊಲೀಸ್ ಇಲಾಖೆಯಲ್ಲಿ ಒಟ್ಟು 30 ವರ್ಷ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ಕಳೆದ ೪ ವರ್ಷಗಳಿಂದ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಸಹಾಯಕ ಉಪನಿರೀಕ್ಷಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ನಿತ್ಯಾನಂದ ಅವರ ಸೇವೆಯನ್ನು ಸ್ಮರಿಸಿಕೊಂಡ ಉಪನಿರೀಕ್ಷಕ ವಿಜಯ ಅಮೀನ್, ಠಾಣೆಯ ಸಿಬ್ಬಂದಿಗಳಾದ ಸುರೇಂದ್ರ ಮತ್ತು ದಿನೇಶ, ಕೆಎನ್‌ಡಿ ಸಿಬ್ಬಂದಿ ಜಯರಾಜ್ ಅವರು ವಯೋನಿವೃತ್ತಿ ಹೊಂದಿದ ನಿತ್ಯಾನಂದ ಅವರನ್ನು ಅಭಿನಂದಿಸಿದರು. ಶಾರದಾ ನಿತ್ಯಾನಂದ, ಠಾಣೆಯ ಸಿಬ್ಬಂದಿಗಳು, ಕೆಎನ್‌ಡಿ ಸಿಬ್ಬಂದಿಗಳು, ನಿವೃತ್ತ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. ಠಾಣೆಯ ಸಿಬ್ಬಂದಿ ಸುರೇಂದ್ರ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

Exit mobile version