Site icon Kundapra.com ಕುಂದಾಪ್ರ ಡಾಟ್ ಕಾಂ

ಕೋಡಿ ಬ್ಯಾರಿಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್: ಶೇ.100 ಫಲಿತಾಂಶ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕೋಡಿಯ ಬ್ಯಾರಿಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್ ( ಸಿ ಬಿ ಎಸ್ ಇ ) ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸತತವಾಗಿ 4ನೇ ವರ್ಷ ಶೇಕಡಾ 100 ಫಲಿತಾಂಶ ದಾಖಲಿಸಿದೆ .

ಉತ್ತೀರ್ಣಗೊಂಡವರಲ್ಲಿ , 5 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯನ್ನು , 6 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯನ್ನು ಪಡೆದಿದ್ದಾರೆ .

ವಿದ್ಯಾರ್ಥಿಗಳಾದ ಸುಹಾ ಅನಮೋಲ್ ಶೇ.88, ಶೈನಾ ಫೆರ್ನಾಂಡಿಸ್ ಶೇ.83, ಭಾಗ್ಯವಂತಿ ಪಾಟೀಲ್ ಶೇ. 79.3, ಸಾನಿಯಾ ಶೇ. 79, ಎಂ. ಕೆ. ಅಮನ್ ಶೇ .75 ಅಂಕ ಗಳಿಸಿದ್ದಾರೆ.

ಬ್ಯಾರಿಸ್ ಗ್ರೂಪಿನ ಸಂಚಾಲಕರಾದ ಸೈಯದ್ ಮಹಮ್ಮದ್ ಬ್ಯಾರಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಅಬ್ದುಲ್ ರೆಹಮಾನ್, ನಿರ್ದೇಶಕರಾದ ದೋಮ ಚಂದ್ರಶೇಖರ್, ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲರು, ಶಿಕ್ಷಕರು ಹಾಗೂ ರಕ್ಷಕ-ಶಿಕ್ಷಕ ಸಂಘದ ಸದಸ್ಯರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

Exit mobile version