Kundapra.com ಕುಂದಾಪ್ರ ಡಾಟ್ ಕಾಂ

ಉಡುಪಿ ಜಿಲ್ಲೆಯ ಕೋಟ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್ ಅವರಿಗೆ ಸಂಪುಟದಲ್ಲಿ ಸ್ಥಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಸಿಎಂ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಉಡುಪಿ ಜಿಲ್ಲೆಯ ಈರ್ವರು ಶಾಸಕರಿಗೆ ಸಚಿವ ಸ್ಥಾನ ಖಚಿತವಾಗಿದೆ. ರಾಜ್ಯ ಸಂಪುಟದಲ್ಲಿ ಸಚಿವರಾಗಿ ಕೋಟ ಶ್ರೀನಿವಾಸ ಪೂಜಾರಿ, ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಸಚಿವ ಸಂಪುಟದಲ್ಲಿ 8 ಲಿಂಗಾಯತ, 7 ಒಕ್ಕಲಿಗ, 7 ಒಬಿಸಿ, 3 ದಲಿತ, 3 ಎಸ್.ಸಿ., 1 ಎಸ್.ಟಿ ಮತ್ತು ಮಹಿಳೆ ಶಾಸಕಿಗೂ ಸ್ಥಾನ ನೀಡಲಾಗಿದ್ದು, ರಾಜ ಭವನದಲ್ಲಿ ಇಂದು ಮಧ್ಯಾಹ್ನ 2.15ಕ್ಕೆ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ.

ಬೊಮ್ಮಾಯಿ ಸಂಪುಟದ ಫೈನಲ್ ಪಟ್ಟಿ:
ಸುನೀಲ್ ಕುಮಾರ್ – ಕಾರ್ಕಳ,
ಕೋಟ ಶ್ರೀನಿವಾಸ ಪೂಜಾರಿ – ಎಂಎಲ್ಸಿ
ಎಸ್ ಅಂಗಾರ-ಸುಳ್ಯ,
ಕೆ.ಎಸ್.ಈಶ್ವರಪ್ಪ -ಶಿವಮೊಗ್ಗ,
ಆರ್.ಅಶೋಕ್- ಪದ್ಮನಾಭ ನಗರ,
ಡಾ.ಸಿ.ಎನ್.ಅಶ್ವತ್ಥ ನಾರಾಯಣ – ಮಲ್ಲೇಶ್ವರ,
ಉಮೇಶ್ ಕತ್ತಿ- ಹುಕ್ಕೇರಿ,
ಎಸ್.ಟಿ.ಸೋಮಶೇಖರ್- ಯಶವಂತಪುರ,
ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ,
ಬೈರತಿ ಬಸವರಾಜ – ಕೆ ಆರ್ ಪುರಂ,
ಮುರುಗೇಶ್ ನಿರಾಣಿ – ಬೀಳಗಿ,
ಶಿವರಾಂ ಹೆಬ್ಬಾರ್- ಯಲ್ಲಾಪುರ,
ಶಶಿಕಲಾ ಜೊಲ್ಲೆ- ನಿಪ್ಪಾಣಿ,
ಕೆಸಿ ನಾರಾಯಣಗೌಡ – ಕೆಆರ್ ಪೇಟೆ,
ಅರಗ ಜ್ಞಾನೇಂದ್ರ – ತೀರ್ಥಹಳ್ಳಿ,
ಗೋವಿಂದ ಕಾರಜೋಳ-ಮುಧೋಳ,
ಮುನಿರತ್ನ- ಆರ್ ಆರ್ ನಗರ,
ಎಂ.ಟಿ.ಬಿ ನಾಗರಾಜ್ – ಎಂಎಲ್ಸಿ,
ಗೋಪಾಲಯ್ಯ- ಮಹಾಲಕ್ಷ್ಮಿ ಲೇಔಟ್,
ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ,
ಹಾಲಪ್ಪ ಆಚಾರ್ – ಯಲ್ಬುರ್ಗ,
ಶಂಕರ್ ಪಾಟೀಲ್ ಮುನೇನಕೊಪ್ಪ – ನವಲುಗುಂದ,
ಪ್ರಭು ಚೌವ್ಹಾಣ್ – ಔರಾದ್,
ವಿ ಸೋಮಣ್ಣ – ಗೋವಿಂದರಾಜನಗರ,
ಆನಂದ್ ಸಿಂಗ್ – ಹೊಸಪೇಟೆ,
ಸಿ.ಸಿ.ಪಾಟೀಲ್ – ನರಗುಂದ,
ಬಿ.ಸಿ.ನಾಗೇಶ್ – ತಿಪಟೂರು,
ಬಿ.ಶ್ರೀ ರಾಮುಲು- ಮೊಳಕಾಲ್ಮೂರು

ಸುನೀಲ್ ಕುಮಾರ್ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾದವರು. ಈ ಹಿಂದೆ ಸಚೇತಕರಾಗಿ ಕೂಡ ಕಾರ್ಯನಿರ್ವಹಿಸಿದರು. ಇದೇ ಮೊದಲ ಬಾರಿಗೆ ಸಚಿವರಾಗುತ್ತಿದ್ದಾರೆ. ಬಿ.ಎಸ್. ಯಡಿಯೂರಪ್ಪನವರ ಸಂಪುಟದಲ್ಲಿ ಸಚಿವರಾಗಿದ್ದ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಇಲ್ಲಿಯೂ ಸಚಿವರಾಗಲಿದ್ದಾರೆ.

ಐದು ಬಾರಿ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಮಂತ್ರಿ ಸ್ಥಾನ ನೀಡಬೇಕೆಂಬ ಆಗ್ರಹ ಅವರ ಅಭಿಮಾನಿಗಳಿಂದ ಕೇಳಿಬಂದಿತ್ತಾದರೂ, ಸ್ಥಾನ ದೊರೆಯದಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ.

Exit mobile version