Kundapra.com ಕುಂದಾಪ್ರ ಡಾಟ್ ಕಾಂ

ಬಾಲಕನ ಅಜಿತ್ ದೇವಾಡಿಗನ ಚಿಕಿತ್ಸೆಗೆ ರೂ.25,500 ನೆರವು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಪಡುವರಿ ಗ್ರಾಮದ ಹೇನ್‌ಬೇರುವಿನ ಬಾಲಕ ಅಜಿತ್ ದೇವಾಡಿಗನ (15) ಚಿಕಿತ್ಸೆಗೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಗೌರಿ ದೇವಾಡಿಗ ಅವರ ನೇತೃತ್ವದಲ್ಲಿ ದಾನಿಗಳ ನೆರವಿನಿಂದ ರೂ. 25,500 ಹಣ ಸಂಗ್ರಹಿಸಿ, ಗುರುವಾರ ಬಾಲಕನ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಉಪ್ಪುಂದ ಗ್ರಾಮ ಪಂಚಾಯತ್ ಸದಸ್ಯೆ ವೀಣಾ ಪೂಜಾರಿ ಹಾಗೂ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಗೌರಿ ದೇವಾಡಿಗ ಅವರು ಈ ಮಾನವೀಯ ಕಾರ್ಯದಲ್ಲಿ ಕೈಜೋಡಿಸಿದ್ದಾರೆ.

ನೆರವಿಗೆ ಮನವಿ:
ಲಿವರ್ ಕಸಿ ಚಿಕಿತ್ಸೆಗೆ 30ರಿಂದ 35 ಲಕ್ಷ ರೂ ಅಗತ್ಯವಿದ್ದು ಸಾಮಾನ್ಯ ರೈತಾಪಿ ಕುಟುಂಬ ಆಗಿರುದರಿಂದ ಹೆಚ್ಚಿನ ಚಿಕಿತ್ಸೆಗೆ ಹಣ ಭರಿಸಲು ಕಷ್ಟವಾಗಿದೆ. ಅಜಿತ್ ಅವರಿಗೆ ಸಹಾಯ ಮಾಡಲಿಚ್ಚಿಸುವವರು ಅವರ ತಂದೆ ರಾಮಕೃಷ್ಣ ದೇವಾಡಿಗ ಅವರ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಬಹುದಾಗಿದೆ.

ಬ್ಯಾಂಕ್ ಆಫ್ ಬರೋಡ ಉಳಿತಾಯ ಖಾತೆ
ಖಾತೆ ಸಂಖ್ಯೆ:
82000100004112
ಐಎಫ್ಎಸ್ಸಿ ಕೋಡ್: BARB0VJBYND
Phone pay or google pay: 8073201943

ದನ್ನೂ ಓದಿ:
ಲಿವರ್ ಸಮಸ್ಯೆಯಿಂದ ಬಳಲುತ್ತಿರುವ ಅಜಿತ್‌ನ ಚಿಕಿತ್ಸೆಗೆ ಬೇಕಿದೆ ನೆರವು https://kundapraa.com/?p=50758 .

Exit mobile version