Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ತಾಲೂಕು ಗ್ಯಾರೇಜು ಮಾಲೀಕರ ಸಂಘ: ಆಹಾರ ಕಿಟ್ ವಿತರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ತಾಲೂಕು ಗ್ಯಾರೇಜು ಮಾಲೀಕರ ಸಂಘಕ್ಕೆ ಸರಕಾರದಿಂದ ಕೊಡಮಾಡಿದ ಆಹಾರ ಕಿಟ್ ವಿರತಣೆ ಹಾಗೂ ಗ್ಯಾರೇಜು ಕಾರ್ಮಿಕರಿಗೆ ಸಂಘಟನೆಯ ಬಗ್ಗೆ ಮಾಹಿತಿ ಕಾರ್ಯಕ್ರಮ ಇಲ್ಲಿನ ಕೆ.ಎಲ್ ಕೋರ್ಟ್ ಬಳಿ ಜರುಗಿತು.

ಕಾರ್ಯಕ್ರಮದ ಅದ್ಯಕ್ಷತೆಯನ್ನು ಬೈಂದೂರು ತಾಲೂಕು ಗ್ಯಾರೇಜು ಮಾಲೀಕರ ಸಂಘದ ಅಧ್ಯಕ್ಷರಾದ ಕೃಷ್ಣಯ್ಯ ಮದ್ದೋಡಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಬೈಂದೂರು ಬಿಜೆಪಿ ಬ್ಲಾಕ್ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ, ಉಡುಪಿ ಗ್ಯಾರೇಜು ಮಾಲೀಕರ ಸಂಘದ ಅಧ್ಯಕ್ಷರಾದ ರೋಷನ್ ಕರ್ಕಡ, ಕುಂದಾಪುರ ಗ್ಯಾರೇಜು ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣ್ ಆಚಾರ್, ಉಪಾಧ್ಯಕ್ಷ ಸದಾನಂದ ಆಚಾರ್, ಕಾರ್ಯದರ್ಶಿ ಸಂಜೀವ, ಖಜಾಂಚಿ ಅಣ್ಣಪ್ಪಯ್ಯ ಆಚಾರ್ ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಶೆಟ್ಟಿಗಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಘವೇಂದ್ರ ಸುರಭಿ ಸ್ವಾಗತಿಸಿರು, ಆನಂದ ಮದ್ದೋಡಿ ನಿರೂಪಿಸಿದರು, ನಾಗರಾಜ್ ಆಚಾರ್ ವಂದಿಸಿದರು.

Exit mobile version