Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ನಿವೃತ್ತ ಫಾರ್ಮಸಿ ಅಧಿಕಾರಿ ಬಿ. ಎಂ. ಚಂದ್ರಶೇಖರ ಅವರಿಗೆ ಬೀಳ್ಕೊಡುಗೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕಳೆದ 39 ವರ್ಷಗಳಿಂದ ಆರೋಗ್ಯ ಇಲಾಖೆಯಲ್ಲಿ ಕುಂಭಾಸಿ, ಕಾರ್ಕಳ, ಉತ್ತರಕನ್ನಡ ಜಿಲ್ಲೆಯ ಭಟ್ಕಳ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ, ಸಾರ್ವಜನಿಕ ಆಸ್ಪತ್ರೆ ಕುಂದಾಪುರದಲ್ಲಿ ಹಿರಿಯ ಫಾರ್ಮಸಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಬಿ.ಎಂ.ಚಂದ್ರಶೇಖರ ಅವರನ್ನು ಪತ್ನಿ ಶೀಲಾ ಚಂದ್ರಶೇಖರ ಅವರ ಸಹಿತವಾಗಿ ಸಾರ್ವಜನಿಕ ಆಸ್ಪತ್ರೆ ಕುಂದಾಪುರ ಇಲ್ಲಿನ ಸಿಬ್ಬಂದಿಗಳು ಕುಂದಾಪುರ ರೋಟರಿ ಲಕ್ಷ್ಮೀ ನರಸಿಂಹ ಕಲಾ ಮಂದಿರದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನಿಸಿದರು.

ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ರಾಬರ್ಟ್ ರೆಬೆಲ್ಲೋ ಅಧ್ಯಕ್ಷತೆ ವಹಿಸಿ, ಪ್ರಾಮಾಣಿಕ ಸೇವೆಗೆ ಹೆಸರಾಗಿದ್ದ ಬಿ. ಎಂ. ಚಂದ್ರಶೇಖರ ಅವರು ಕೆಲಸ ಮಾಡಿದ ಕಡೆಗಳಲ್ಲಿ ಉತ್ತಮ ಹೆಸರನ್ನು ಸಂಪಾದಿಸಿದ್ದು, ಸದಾ ರೋಗಿಗಳ ಸಹಾಯಕ್ಕೆ ಮಿಡಿಯುತ್ತಿದ್ದರು. ವೈದ್ಯರು, ಶುಶ್ರೂಷಕರು, ಸಿಬ್ಬಂದಿಗಳು ಸೇರಿದಂತೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ ಸಾರ್ಥಕ ಸೇವೆಯನ್ನು ಆರೋಗ್ಯ ಇಲಾಖೆಗೆ ನೀಡಿದ್ದಾರೆ ಎಂದು ಪ್ರಶಂಸಿಸಿದರು.

ಮುಖ್ಯ ಅತಿಥಿ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ ಉಡುಪ ಅವರು ಮಾತನಾಡಿ ಆರೋಗ್ಯ ಇಲಾಖೆಗೆ ಬಿ. ಎಂ. ಚಂದ್ರಶೇಖರ ಅವರು ಅಪಾರ ಸೇವೆಯನ್ನು ನೀಡಿದ್ದಾರೆ. ಅವರ ಸೇವಾತತ್ಪರತೆ ಇತರರಿಗೆ ಮಾದರಿಯಾಗಿದೆ. ಅವರ ನಿವೃತ್ತ ಜೀವನ ಸುಂದರವಾಗಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶುಶ್ರೂಷಕರ ಅಧೀಕ್ಷಕಿ ಅನ್ನಪೂರ್ಣ, ಚಂದ್ರಾವತಿ, ಸೌಮ್ಯ, ಕಸ್ತೂರಿ ಶೆಟ್ಟಿ, ಮಮತಾ ಗಾಣಿಗ, ಸುರೇಖಾ, ಗಾಯತ್ರಿ ಕೆ. ಇವರುಗಳು ಬಿ. ಎಂ. ಚಂದ್ರಶೇಖರ ದಂಪತಿಗಳನ್ನು ಗೌರವಿಸಿದರು

ಶಸ್ತ್ರ ಚಿಕಿತ್ಸಕರಾದ ಡಾ. ಉದಯಶಂಕರ್, ಪಿಜಿಷಿಯನ್ ಡಾ.ನಾಗೇಶ್, ಇಂಡಿಯನ್ ರೆಡ್‌ಕ್ರಾಸ್ ಸಂಸ್ಥೆಯ ಚೇರ್‌ಮೆನ್ ಎಸ್.ಜಯಕರ ಶೆಟ್ಟಿ, ಕುಂದಾಪುರ ಕಲಾಕ್ಷೇತ್ರದ ಅಧ್ಯಕ್ಷ ಬಿ.ಕಿಶೋರ್ ಕುಮಾರ್, ಶುಶ್ರೂಷಕಿ ಆಶಾ ಸುವರ್ಣ, ಫಾರ್ಮಸಿ ಅಧಿಕಾರಿ ಶ್ರೀಶ ಭಟ್, ಉಡುಪಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಮರಾವ್, ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ. ರಾಜೇಶ್ವರಿ, ಉಡುಪಿ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರೆಗಾರ್, ಕಛೇರಿ ಅಧೀಕ್ಷಕಿ ಲಿನೋರಾ ಮಸ್ಕರೇನಸ್, ಡಾ.ಚಂದ್ರ, ಡಾ.ವಿಜಯಶಂಕರ, ಡಾ.ವಿಜಯಲಕ್ಷ್ಮೀ ನಾಯಕ್, ಡಾ.ವೀಣಾ, ಕಛೇರಿ ಅಧೀಕ್ಷಕರಾದ ರಾಘವೇಂದ್ರ ಐತಾಳ್, ಕೋವಿಡ್ ಲಸಿಕಾ ನೋಡಲ್ ಅಧಿಕಾರಿ ದಿನಕರ ಶೆಟ್ಟಿ, ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಅಧ್ಯಕ್ಷರಾದ ಗಿರಿಜಾ ಮಾಣಿ ಗೋಪಾಲ ಮತ್ತು ಸದಸ್ಯರು, ಮೊರ್ನಿಂಗ್ ವಾಲಿಬಾಲ್ ತಂಡದ ಕೆ. ಬಾಲಚಂದ್ರ ಶೆಟ್ಟಿ ಮತ್ತು ಸದಸ್ಯರು ಉಪಸ್ಥಿತರಿದ್ದರು.

ಎನ್‌ಸಿಡಿ ಕೌನ್ಸಿಲರ್ ವೀಣಾ ಕಾರ್ಯಕ್ರಮ ನಿರ್ವಹಿಸಿ, ಲ್ಯಾಬ್ ವಿಭಾಗದ ನವೀನ ಡಿ’ಸೋಜಾ ವಂದಿಸಿದರು.

Exit mobile version