Kundapra.com ಕುಂದಾಪ್ರ ಡಾಟ್ ಕಾಂ

ಬಸ್ರೂರು ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನ: ಬಿ. ಶ್ರೀಕಾಂತ ಪೈ ಅವರಿಗೆ ಗೌರವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಬ್ಲ್ಯಾಕ್ ಫಂಗಸ್‌ಗೆ ಔಷಧಿಯನ್ನು ಸಂಶೋಧಿಸಿದ ಗಂಗೊಳ್ಳಿ ಮೂಲದ ಬಿ.ಶ್ರೀಕಾಂತ ಪೈ ಮುಂಬೈ ಅವರನ್ನು ಕುಂದಾಪುರ ತಾಲೂಕಿನ ಬಸ್ರೂರು ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದ ಪರವಾಗಿ ಗೌರವಿಸಿ ಅಭಿನಂದಿಸಲಾಯಿತು.

ದೇವಸ್ಥಾನಕ್ಕೆ ಭೇಟಿ ನೀಡಿದ ಬಿ.ಶ್ರೀಕಾಂತ ಪೈ ಅವರನ್ನು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕಾಶೀನಾಥ ಪೈ ಹಾಗೂ ಕೆ.ಗಣೇಶ ಪ್ರಭು ಅವರಿಗೆ ಶ್ರೀದೇವರ ಪ್ರಸಾದ ನೀಡಿ ಸನ್ಮಾನಿಸಿ ಗೌರವಿಸಿದರು. ಬಿ. ಗೋವಿಂದ್ರಾಯ ಪೈ, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾದ ಎಸ್.ದಿನಕರ ಶೆಣೈ, ಎಸ್.ಗೋಪಾಲಕೃಷ್ಣ ಪೈ, ಎಸ್. ಗೋಪಾಲಕೃಷ್ಣ ಪೈ, ಎಂ.ವಿಶ್ವನಾಥ ಪೈ, ಎಸ್.ಪ್ರಭಾಕರ ಪೈ, ಎಂ.ಅನಂತ ಪೈ, ಬಿ.ಗಣೇಶ ಪೈ, ಯು.ಕಮಲಾಕ್ಷ ಪೈ, ಅರುಣ್ ಶೆಣೈ, ಪತ್ರಕರ್ತ ಬಿ. ರಾಘವೇಂದ್ರ ಪೈ, ಬಿ. ರಾಜೇಶ ಪೈ, ದೇವಸ್ಥಾನದ ಅರ್ಚಕರು ಮತ್ತಿತರರು ಉಪಸ್ಥಿತರಿದ್ದರು.

Exit mobile version