Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ರೋಟರಿ ಕ್ಲಬ್‌ನಿಂದ ಸಮಾಜ ಸೇವಕ ಇಬ್ರಾಹಿಮ್ ಅವರಿಗೆ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ:
ಇಲ್ಲಿನ ರೋಟರಿ ಕ್ಲಬ್ ನಿಂದ ಹಗಲು ರಾತ್ರಿ ಎನ್ನದೇ ಕಷ್ಟದಲ್ಲಿರುವ ಜನರಿಗೆ ಎಂಬುಲೆನ್ಸ್ ಸೇವೆಯನ್ನು ಬಹಳ ವರ್ಷಗಳಿಂದಲೂ ನೀಡುತ್ತಾ ಬಂದಿರುವ ಸಮಾಜ ಸೇವಕ ಇಬ್ರಾಹಿಮ್ ಅವರನ್ನು ಗುರುತಿಸಿ ಸನ್ಮಾನಿಸಲಾಯಿತು.

ರೋಟರಿಯ ಸುಗುಣಾ ಸನ್ಮಾನಿತರನ್ನು ಪರಿಚಸಿಯಿದರು, ಗಿರೀಶ್ ಮತ್ತು ಕೃಷ್ಣ ಇವರ ಸೇವೆಯ ಕುರಿತು ಹೇಳಿದರು, ಕ್ಲಬ್ ಅಧ್ಯಕ್ಷರಾದ ರಾಜೇಶ್ ಎಂ ಜಿ. ಹಾಗೂ ಹಿರಿಯ ಸದಸ್ಯರನ್ನೊಳಗೊಂಡು ಇಬ್ರಾಹಿಮ್ ಅವರನ್ನು ಗೌರವಿಸಲಾಯಿತು. ಸನ್ಮಾನಿತರಾದ ಇಬ್ರಾಹಿಮ್ ಅವರು ಸಂತಸ ವ್ಯಕ್ತ ಪಡಿಸಿದರು. ಕಾರ್ಯದರ್ಶಿ ನಾರಾಯಣ ನಾಯ್ಕ ಧನ್ಯವಾದ ಸಮರ್ಪಿಸಿದರು.

Exit mobile version