Kundapra.com ಕುಂದಾಪ್ರ ಡಾಟ್ ಕಾಂ

ಕರಾವಳಿಯ ಮೊದಲ ಐಟಿ ಕಂಪೆನಿ ರೋಬೋಸಾಫ್ಟ್ 805 ಕೋಟಿಗೆ ಮಾರಾಟ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ:
ಸಾವಿರಾರು ಜನರಿಗೆ ಉದ್ಯೋಗವನ್ನು ದೊರಕಿಸಿದ್ದ ಕರಾವಳಿಯ ಮೂಲದ ಐಟಿ ಕಂಪೆನಿ ರೋಬೋಸಾಫ್ಟ್ ಟೆಕ್ನಾಲಜಿಸ್ 805 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಜಪಾನ್ ಮೂಲದ ಟೆಕ್ನೋಪ್ರೋ ಹೋಲ್ಡಿಂಗ್ ಕಂಪೆನಿ ಡಿಜಿಟಲ್ ಟ್ರಾನ್ಸ್ಫಾರ್ಮೇಶನ್ ಸೆಲ್ಯೂಷನ್ಸ್ ಸಂಸ್ಥೆಯು ರೋಬೋಸಾಫ್ಟ್‌ನ್ನು ತನ್ನ ತೆಗೆದುಕೊಂಡಿದೆ.

1996ರಲ್ಲಿ ಉಡುಪಿ ಜಿಲ್ಲೆಯ ಆರಂಭಗೊಂಡ ರೋಬೋಸಾಫ್ಟ್ ಟೆಕ್ನಾಲಜಿಸ್, ಸಂತೆಕಟ್ಟೆಯಲ್ಲಿ ಅತ್ಯಾಧುನಿಕ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿತ್ತು. ಉಡುಪಿಯ ರೋಹಿತ್ ಭಟ್ ಅವರು ಸಂಸ್ಥೆಯನ್ನು ಸ್ಥಾಪಿಸಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಚಿಕ್ಕ ಮಟ್ಟದಲ್ಲಿ ಆರಂಭಗೊಂಡ ಕಂಪೆನಿಯಲ್ಲಿ ಪ್ರಸ್ತುತ ಸಾವಿರಾರು ಉದ್ಯೋಗಿಗಳು ದುಡಿಯುತ್ತಿದ್ದು, ಭಾರತ ಪ್ರಮುಖ ಮಾಧ್ಯಮ ಲೋಕದಲ್ಲಿ ಮೊಬೈಲ್ ಆಪ್ಗಳನ್ನು ಅಭಿವೃದ್ದಿ ಪಡಿಸಿದ ಹೆಗ್ಗಳಿಕೆ ಹೊಂದಿದೆ. ಆ್ಯಪಲ್ ಸಂಸ್ಥೆಯೊಂದಿಗೂ ವ್ಯಾವಹಾರಿಕ ಸಂಬಂಧ ಹೊಂದಿದ್ದ ರೋಬೋಸಾಫ್ಟ್, ಅಮೇರಿಕಾ, ಜಪಾನ್ ಸೇರಿದಂತೆ ವಿಶ್ವದ ಹಲವು ಕಡೆಗಳಲ್ಲಿಯೂ ತನ್ನ ವ್ಯವಹಾರವನ್ನು ವಿಸ್ತರಣೆ ಮಾಡಿದೆ.

ಜಪಾನ್ ಮೂಲದ ಟೆಕ್ನೋಪ್ರೋ ಸಂಸ್ಥೆಗೆ ರೋಬೋಸಾಫ್ಟ್ನ ಶೇಕಡಾ 100 ರಷ್ಟು ಶೇರುಗಳನ್ನು ಮಾರಾಟ ಮಾಡುವ ಕುರಿತು ಖುದ್ದು ರೋಬೋಸಾಫ್ಟ್ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ರೋಹಿತ್ ಭಟ್ ಟ್ವೀಟ್ ಮಾಡಿದ್ದಾರೆ. ರೋಹಿತ್ ಭಟ್ ಅವರು ತಮ್ಮ ಇನ್ನೊಂದು ಸಂಸ್ಥೆಯಾದ 99ಗೇಮ್ಸ್ ಮುನ್ನಡೆಸಲಿದ್ದಾರೆ. ಟೆಕ್ನೋಪ್ರೋ ಆರಂಭದಲ್ಲಿ ರೋಬೋಸಾಫ್ಟ್ ಕಂಪೆನಿಯ ಶೇ.80ರಷ್ಟು ಶೇರುಗಳನ್ನು ಹಾಗೂ ಒಂದು ವರ್ಷದ ಬಳಿಕ ಶೇ.20ರಷ್ಟು ಶೇರುಗಳನ್ನು ಖರೀದಿಸಲಿದೆ. ರೋಬೋಸಾಫ್ಟ್ ಹಾಲಿ ಸಿಇಓ ರವಿ ತೇಜ ಬೊಮ್ಮಿರೆಡಿಪಳ್ಳಿ ನೂತನ ಸಿಇಓ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಪ್ರಾಡೆಕ್ಟ್ ಅಡ್ವೈಸರಿ, ಡಿಸೈನ್, ಎಂಜಿನಿಯರಿಂಗ್ ಮತ್ತು ಅನಾಲಿಟಿಕ್ಸ್’ನಲ್ಲಿ ರೋಬೋಸಾಫ್ಟ್ ಪರಿಣತಿ ಹೊಂದಿದೆ. 1996ರಲ್ಲಿ ಸಾಫ್ಟ್ವೇರ್ ಡೆವಲಪರ್ ಆಗಿ ಆರಂಭಗೊಂಡ ಕಂಪೆನಿ 2008ರಲ್ಲಿ ಮೊಬೈಲ್ ಆ್ಯಪ್ ಅಭಿವೃದ್ಧಿ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಇಂಟರ್ನೆಟ್ ಬ್ರ್ಯಾಂಡ್ಗಳಿಗೆ ಹಾಗೂ ಮಾಧ್ಯಮ ಸಂಸ್ಥೆಗಳಿಗೆ ಮೊಬೈಲ್ ಅಪ್ಲಿಕೇಶನ್, ಗೇಮಿಂಗ್ ಸಾಫ್ಟ್ವೇರ್ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದ ಸಂಸ್ಥೆ ವಾರ್ಷಿಕ 180 ಕೋಟಿ ವಹಿವಾಟು ಹೊಂದಿದೆ. ಪ್ರಸ್ತುತ ಹಣಕಾಸಿನ ವರ್ಷದಲ್ಲಿ ಭರ್ಜರಿ 184 ಕೋಟಿ ರೂಪಾಯಿ ಲಾಭವನ್ನು ಗಳಿಸಿದೆ. ಕಳೆದ ಸಾಲಿನಲ್ಲಿ 97.4ಕೋಟಿ ಲಾಭ ಗಳಿಸಿತ್ತು. ಇದೀಗ ಉಡುಪಿ ಮೂಲದ ಕಂಪೆನಿಯೊಂದು ಪ್ರಖ್ಯಾತ ಕಂಪೆನಿಯ ಪಾಲಾಗಿದೆ.

Watch Yakshagana Now

Exit mobile version