Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ರೋಟರಿ ಕ್ಲಬ್‌ನಿಂದ ಬಿ. ಶ್ರೀಕಾಂತ ಪೈ ಅವರಿಗೆ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ:
ಬ್ಲ್ಯಾಕ್ ಫಂಗಸ್‌ಗೆ ಔಷಧಿಯನ್ನು ಸಂಶೋಧಿಸಿ ಸಮಾಜಕ್ಕೆ ಸಮರ್ಪಿಸಿದ ಗಂಗೊಳ್ಳಿ ಮೂಲದ ಬಿ.ಶ್ರೀಕಾಂತ ಪೈ ಮುಂಬೈ ಅವರನ್ನು ಗಂಗೊಳ್ಳಿ ರೋಟರಿ ಕ್ಲಬ್ ಪರವಾಗಿ ಗೌರವಿಸಿ ಅಭಿನಂದಿಸಲಾಯಿತು.

ಗಂಗೊಳ್ಳಿಯ ಸ್ವಗೃಹದಲ್ಲಿ ಬಿ. ಶ್ರೀಕಾಂತ ಪೈ ಅವರನ್ನು ಭೇಟಿ ಮಾಡಿದ ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ರಾಜೇಶ ಎಂ.ಜಿ., ಕಾರ್ಯದರ್ಶಿ ನಾರಾಯಣ ಇ.ನಾಯ್ಕ್ ಹಾಗೂ ಜೋನಲ್ ಲೆಫ್ಟಿನೆಂಟ್ ಕೆ.ರಾಮನಾಥ ನಾಯಕ್ ಹಾಗೂ ರೋಟರಿ ಸದಸ್ಯರು ಸನ್ಮಾನಿಸಿ ಗೌರವಿಸಿದರು.

ಗಂಗೊಳ್ಳಿ ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷರಾದ ಉಮೇಸ ಮೇಸ್ತ, ಜನಾರ್ಧನ ಪೂಜಾರಿ, ಪ್ರದೀಪ ಡಿ.ಕೆ., ಬಿ.ಲಕ್ಷ್ಮೀಕಾಂತ ಮಡಿವಾಳ, ವಾಸುದೇವ ಶೇರುಗಾರ್, ನಿಯೋಜಿತ ಅಧ್ಯಕ್ಷೆ ಸುಗುಣಾ ಆರ್.ಕೆ., ಗಂಗೊಳ್ಳಿ ಗ್ರಾಪಂ ಉಪಾಧ್ಯಕ್ಷೆ ಪ್ರೇಮಾ ಸಿ.ಪೂಜಾರಿ, ಗಂಗೊಳ್ಳಿ ರೋಟರಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

Exit mobile version