Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಪೊಲೀಸ್ ಠಾಣೆಗೆ ಏಳು ಬ್ಯಾರಿಕೇಡ್ ಹಸ್ತಾಂತರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಸಾಮಾಜಿಕ ಕೆಲಸಗಳು ಆಗಬೇಕೆಂದರೆ ದಾನಿಗಳ ಸಹಕಾರ ಅತ್ಯಗತ್ಯ ಮುಳ್ಳಿಕಟ್ಟೆ ಸರ್ಕಲ್ ಎನ್ನುವುದು ಅಪಾಯಕಾರಿ ಜಂಕ್ಷನ್ ಆಗಿದೆ ಸಾರ್ವಜನಿಕರು ಮತ್ತು ವಾಹನ ಸವಾರರ ಹಿತ ದೃಷ್ಟಿಯಿಂದ ಬ್ಯಾರೆಕೇಡ್ ವ್ಯವಸ್ಥೆ ಮಾಡಿರುವುದು ತುಂಬಾ ಉತ್ತಮವಾದ ಕೆಲಸವಾಗಿದೆ ಎಂದು ಹೆಮ್ಮಾಡಿ ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುಮಾರ ಶೆಟ್ಟಿ ಹಕ್ಲಾಡಿ ಹೇಳಿದರು.

ಹೊಸಾಡು ಗ್ರಾಮದ ಮುಳ್ಳಿಕಟ್ಟೆಯಲ್ಲಿ ಶನಿವಾರ ನಡೆದ ಬ್ಯಾರಿಕೇಡ್ ವಿತರಣೆ ಮತ್ತು ಸನ್ಮಾನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘ ನಿ, ಹೆಮ್ಮಾಡಿ (ಹೊಸಾಡು ಶಾಖೆ), ಗ್ರಾಮ ಪಂಚಾಯತ್ ಹೊಸಾಡು, ನಗು ಗ್ರೂಪ್ಸ್ ಮುಳ್ಳಿಕಟ್ಟೆ, ಹೇರಿಯ. ಪಿ ನಾಯ್ಕ್ ಮತ್ತು ಮಕ್ಕಳು ಮುಳ್ಳಿಕಟ್ಟೆ, ಪ್ರಮೋದ ಆಚಾರ್ಯ ಕಾಳಮ್ಮ ವೆಲ್ಡಿಂಗ್ ವರ್ಕ್ಸ್ ಮುಳ್ಳಿಕಟ್ಟೆ, ಸತೀಶ ಶೆಟ್ಟಿ ಮೂಕಾಂಬಿಕಾ ಆಲೂರು, ಸುಪ್ರಭಾ ಫ್ಯುಯೆಲ್ಸ್ ಮತ್ತು ಸರ್ವಿಸ್ ಮುಳ್ಳಿಕಟ್ಟೆ ಅವರು ಕೊಡಮಾಡಿದ ಏಳು ಬ್ಯಾರಿಕೇಡ್‌ಗಳನ್ನು ಗೋವಿಂದ ಬಾಬು ಪೂಜಾರಿ ಅವರು ಗಂಗೊಳ್ಳಿ ಪೊಲೀಸ್ ಠಾಣೆಯ ಎಸ್‌ಐ ನಂಜಾ ನಾಯ್ಕ್ ಅವರಿಗೆ ಹಸ್ತಾಂತರಿಸಿದರು.

ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಗೋವಿಂದ ಬಾಬು ಪೂಜಾರಿ ಅವರನ್ನು ಹೊಸಾಡು ಗ್ರಾಮಸ್ಥರ ಪರವಾಗಿ ಪ್ರದೀಪ ಬಿಲ್ಲವ ಮುಳ್ಳಿಕಟ್ಟೆ ಸನ್ಮಾನಿಸಿದರು.

ಹೊಸಾಡು ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಅರಾಟೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸುಧಾಕರ ಶೆಟ್ಟಿ ನಗು ಗ್ರೂಪ್ಸ್ ಮುಳ್ಳಿಕಟ್ಟೆ, ಹಕ್ಲಾಡಿ ಗ್ರಾಪಂ ಮಾಜಿ ಸದಸ್ಯ ಸತೀಶ ಶೆಟ್ಟಿ ಯಳೂರು, ಹೊಸಾಡು ಗ್ರಾಪಂ ಮಾಜಿ ಸದಸ್ಯ ಸೀತಾರಾಮ ಶೆಟ್ಟಿ ಕೇರಿಕೊಡ್ಲು, ಶಂಕರ ನಾಗ ಆಟೋ ಫ್ರೆಂಡ್ಸ್ ಮುಳ್ಳಿಕಟ್ಟೆ ಮತ್ತು ಅಂಬಾ ಫ್ರೆಂಡ್ಸ್ ಮುಳ್ಳಿಕಟ್ಟೆಯ ಸದಸ್ಯರು, ಗಂಗೊಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ದಿನೇಶ್ ಪಿ., ಆಶಾ ಕಾರ್ಯಕರ್ತೆ ಪ್ರೇಮ. ಎಸ್ ಮತ್ತಿತರರು ಉಪಸ್ಥಿತರಿದ್ದರು. ಪ್ರದೀಪ ಆಚಾರ್ಯ ಅರಾಟೆ ಸ್ವಾಗತಿಸಿ, ವಂದಿಸಿದರು.

Exit mobile version