Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಡಿವೈಎಫ್ಐ: ಉದ್ಯೋಗದ ಹಕ್ಕಿಗಾಗಿ ಪ್ರತಿಭಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ, ಉದ್ಯೋಗದ ಹಕ್ಕಿಗಾಗಿ ಡಿವೈಎಫ್ಐ ರಾಜ್ಯ ಸಮಿತಿಯ ಕರೆಯ ಮೇರೆಗೆ ರಾಜ್ಯಾದ್ಯಂತ ಜರಗಿದ ಯುವಜನರ ಪ್ರತಿಭಟನೆಯ ಭಾಗವಾಗಿ ಬೈಂದೂರು ತಾಲೂಕು ಡಿವೈಎಫ್ಐ ಆಶ್ರಯದಲ್ಲಿ ಪ್ರತಿಭಟನೆ ನಡೆಯಿತು.

ಡಿವೈಎಫ್ಐ ಬೈಂದೂರು ತಾಲೂಕು ಸಮಿತಿ ಮುಖಂಡರಾದ ವಿಜಯ. ಬಿ. ಕಿರಿಮಂಜೇಶ್ವರ, ಜೊಕಿಮ್ ಗ್ರಾಸ್, ಯಡ್ತರೆ,ಹರೀಶ್ ಬೈಂದೂರು, ಚಾಕೊ ಥೋಮಸ್ ಬೈಂದೂರು, ಉದಯ ಗಾಣಿಗ ಮೊಗೇರಿ, ರೋನಿ ಶಿರೂರು, ನಾಗರತ್ನ ಪಡುವರಿ, ಭವಾನಿ ಹೇನಬೇರು, ಪಡುವರಿ, ರತ್ನಿ ಪಡುವರಿ, ಲಕ್ಷ್ಮಿ ಯಡ್ತರೆ, ಬಾಬು ಕೆ ದೇವಾಡಿಗ, ಉಪ್ಪುಂದ, ರವೀಂದ್ರ ಮರಾಠಿ ಯಳಜೀತ್ ಮೊದಲಾದವರು ಹೋರಾಟದ ನೇತೃತ್ವ ವಹಿಸಿದ್ದರು.

ಕಾಮಿ೯ಕ ಮುಖಂಡರಾದ ಗಣೇಶ ತೊಂಡೆಮಕ್ಕಿ, ರೊನಾಲ್ಡ್ ರಾಜೇಶ್ ಕ್ವಾಡ್ರಸ್, ಗಣೇಶ ಮೊಗವೀರ ಬೈಂದೂರು, ವೆಂಕಟೇಶ್ ಕೋಣಿ, ಸಾವಿತ್ರಿ ಹೆಮ್ಮಾಡಿ, ಸರಸ್ವತಿ ಬೈಂದೂರು, ಲಕ್ಷ್ಮಿ ಯಡ್ತರೆ, ಡಾ. ಬಿ. ವಿ. ಬೇಬಿ ಹಾಲ್ಕಲ್ ಮೊದಲಾದವರು ಇದ್ದರು.

Exit mobile version