Kundapra.com ಕುಂದಾಪ್ರ ಡಾಟ್ ಕಾಂ

ದಸಂಸ: ಕೆರಾಡಿ ಗ್ರಾಮ ಶಾಖೆ ಉದ್ಘಾಟನೆ

ಕುಂದಾಪುರ: ಸಂಘಟನೆಗಳು ಸಮಾಜದ ಸ್ಯಾಸ್ಥ್ಯ ಕಾಪಾಡಬೇಕೇ ಹೊರತು ಗೊಂದಲ ಸೃಷ್ಟಿಸುವಂತಾಗಬಾರದು. ಈ ನಿಟ್ಟಿನಲ್ಲಿ ಸಂವಿಧಾನ ಹಕ್ಕನ್ನು ಪಡೆದು ಸರ್ವಾಂಗೀಣ ಅಬಿವೃದ್ದಿಯತ್ತ ಸಾಗಲು ದಲಿತರಿಗೆ ಸಂಘಟನೆ ಅತ್ಯವಶ್ಯಕವಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ) ಉಡುಪಿ ಜಿಲ್ಲಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಹೇಳಿದರು.

ಅವರು ಕೆರಾಡಿ ಗ್ರಾಮದ ದೀಟಿ ಸಬಾಭವನದಲ್ಲಿ ನೂತನ ದಸಂಸದ ನೂತನ ಗ್ರಾಮ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.

ಇತ್ತೀಚೆಗೆ ದಲಿತರ ಒಗ್ಗಟ್ಟನ್ನು ಮುರಿದು ದಲಿತ ಚಳುವಳಿಯನ್ನು ಬಲಿತರು ಹತ್ತಿಕ್ಕುವಂತಾಗಿದೆ. ದಲಿತ ಸಮುದಾಯದವರು ಒಗ್ಗಟ್ಟಿನಿಂದ ಸಂಘಟನೆಯನ್ನು ಬಲಪಡಿಸಿ ಶೋಷಿತರಿಗೆ ಜನಜಾಗ್ರತಿಯನ್ನು ಮೂಡಿಸಬೇಕಾಗಿದೆ ದಲಿತ ಸಂಘಟನೆ ಎಂದರೆ ದಲಿತರ ಸ್ವಾಬಿಮಾನ ಜಾಗೃತಿಯೇ ವಿನಾ: ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಗೊಂದಲವನ್ನು ಸೃಷ್ಟಿಸುವುದಲ್ಲ ಎಂದವರು ದಲಿತ ಸಮುದಾಯಕ್ಕೆ ಕಿವಿಮಾತು ಹೇಳಿದರು.

ತಾಲೂಕು ಸಂಚಾಲಕ ಕೆ. ಸಿ. ರಾಜು ಬೆಟ್ಟಿನಮನೆ ಅಧ್ಯಕ್ಷತೆ ವಹಿಸಿದ್ದರು ಮುಖ್ಯ ಅತಿಥಿ ಕೊಲ್ಲೂರು ಆರಕ್ಷಕ ಠಾಣಾಧಿಕಾರಿ ಜಯಂತ್ ಅವರು  ಡಾ. ಬಿ .ಆರ್. ಅಂಬೇಡ್ಕರ್ ಅವರ ಬಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಪ್ರಧಾನ ಬಾಷಣಕಾರ ಜಿಲ್ಲಾ ಪ್ರಧಾನ ಸಂಘಟನಾ ಸಂಚಾಲಕ ವಕೀಲ ಮಂಜುನಾಥ್ ಗಿಳಿಯಾರು ಅವರು ಮಾತನಾಡಿ, ದಲಿತರಿಗೆ ಅಂಬೇಡ್ಕರ್ ಅವರೇ ಏಕಮೇವಾ ನಾಯಕ ಅಸ್ಪ್ರಶ್ಯತೆ ಅಸಮಾನತೆ ವ್ಯವಸ್ಥೆಯ ವಿರುದ್ದ ದಾಸ್ಯದಿಂದ ಮುಕ್ತಿಗಾಗಿ ಜ್ಞಾನ ಸಂಗ್ರಹ ಮತ್ತು ಅರಿವಿನತ್ತ ಸಾಗಲು ದಲಿತ ಸಮುದಾಯದ ಅಬಿವೃದ್ದಿಗಾಗಿ ದಲಿತ ಸಂಘಟನೆ ಕಾರ್ಯಪ್ರವೃತ್ತವಾಗಲಿದೆ ಎಂದರು.

ನೂತನ ಶಾಖೆಯ ಪದಾಧಿಕಾರಿಗಳಿಗೆ ಪದಗ್ರಹಣವನ್ನು ಮಾಡಿ ಪ್ರಾಮಾಣವಚನವನ್ನು ಬೋಧಿಸಿದ ಉಡುಪಿ ಜಿಲ್ಲಾ ಪ್ರಧಾನ ಸಂಘಟನಾ ಸಂಚಾಲಕರಾದ ವಾಸುದೇವ ಮುದೂರು ಅವರು ಮಾತನಾಡಿ, ದಲಿತ ಸಂಘರ್ಷ ಸಮಿತಿ ಎಂದರೆ ಯಾವುದೇ ವ್ಯಕ್ತಿಯ, ವರ್ಗದ ವಿರುದ್ದ ಹೋರಾಟಕ್ಕಲ್ಲ, ಸಮಾನತೆಗಾಗಿ ವ್ಯವಸ್ಥೆಯ ವಿರುದ್ದ ಹೋರಾಡಿ ಸಂವಿಧಾನಬದ್ದ ಹಕ್ಕಗಳನ್ನು ಪಡೆಯಲು ಜನಜಾಗ್ರತಿಯನ್ನು ಮೂಡಿಸುವುದೇ ನಮ್ಮ ಮೂಲ ಉದ್ದೇಶ ಎಂದರು.

Exit mobile version