Site icon Kundapra.com ಕುಂದಾಪ್ರ ಡಾಟ್ ಕಾಂ

ಆರ್ಡಿ: ನೀರಿನಲ್ಲಿ ಮುಳುಗಿ ಇಬ್ಬರು ಯುವಕರ ಸಾವು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಹೊಳೆಗೆ ಸ್ನಾನಕ್ಕೆಂದು ತೆರಳಿದ ಯುವಕರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಆರ್ಡಿ ಗ್ರಾಮದ ಗಂಟುಬೀಳು ಎಂಬಲ್ಲಿ ಸೋಮವಾರ ನಡೆದಿದೆ. ಅಲ್ಬಾಡಿ ಗ್ರಾಮದ ನಿವಾಸಿ ಮೋಹನ ನಾಯ್ಕ್ (22) ಹಾಗೂ ಸುರೇಶ ನಾಯ್ಕ್ (19) ಮೃತ ದುರ್ದೈವಿಗಳು.

ಅಲ್ಬಾಡಿ ಗ್ರಾಮದ ನಿವಾಸಿಗಳಾದ ದಿ. ಕಾಳ ನಾಯ್ಕ್ ಅವರ ಪುತ್ರ ಮೋಹನ ನಾಯ್ಕ್ (22) ಹಾಗೂ ಮಹಾಬಲ ನಾಯ್ಕ್ ಅವರ ಪುತ್ರ ಸುರೇಶ (19) ಸಾವನ್ನಪ್ಪಿದ ದುರ್ದೈವಿಗಳು.

ಆಗಿದ್ದೇನು?
ಅಲ್ಬಾಡಿ ಗ್ರಾಮದ ನಿವಾಸಿಗಳಾದ ದಿ. ಕಾಳ ನಾಯ್ಕ್ ಅವರ ಪುತ್ರ ಮೋಹನ ನಾಯ್ಕ್ (22) ಹಾಗೂ ಮಹಾಬಲ ನಾಯ್ಕ್ ಅವರ ಪುತ್ರ ಸುರೇಶ (19) ಅವರೊಂದಿಗೆ ಗಾರೆ ಕೆಲಸಕ್ಕೆ ಆರ್ಡಿ ಗ್ರಾಮದ ಗಂಟುಬೀಳು ಎಂಬಲ್ಲಿರುವ ಮನೆಯೊಂದಕ್ಕೆ ಕೆಲಸಕ್ಕೆಂದು ತೆರಳಿದ್ದರು. ಮಧ್ಯಾಹ್ನ ಸುಮಾರು 1.30ರ ವೇಳೆಗೆ ಕೆಲಸ ಮುಗಿಸಿ, ಸ್ನಾನಕ್ಕೆಂದು ಆ ಮನೆಯ ಸಮೀಪವೇ ಇದ್ದ ಹೊಳೆಗೆ ತೆರಳಿ ನೀರಿಗೆ ಇಳಿದ ಇಬ್ಬರೂ ಮುಳುಗಿ ಸಾವನ್ನಪ್ಪಿದ್ದಾರೆ. ಹೊಳೆ ಸುಮಾರು 15 ಅಡಿ ಆಳವಿತ್ತು ಎನ್ನಲಾಗಿದೆ. ಸ್ಥಳಿಯರು ಸಂಜೆಯ ತನಕ ಹೊಳೆಯಲ್ಲಿ ಹುಡುಕಾಟ ನಡೆಸಿದ್ದು, ಸಂಜೆಯ ವೇಳೆಗೆ ಇಬ್ಬರ ಮೃತದೇಹವನ್ನು ಪತ್ತೆಹಚ್ಚಿ ಹೊಳೆಯಿಂದ ತೆಗೆಯಲಾಗಿದೆ.

ಘಟನಾ ಸ್ಥಳಕ್ಕೆ ಶಂಕರನಾರಾಯಣ ಪಿಸ್ಐ ಶ್ರೀಧರ ನಾಯ್ಕ್, ಪೊಲೀಸ್ ಸಿಬ್ಬಂದಿ, ಬೆಳ್ವೆ ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಸೂರ್ಗೋಳಿ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version