Site icon Kundapra.com ಕುಂದಾಪ್ರ ಡಾಟ್ ಕಾಂ

ಮಹಾಲಸಾ ಮೋಟಾರ್ ಫ್ಯೂಯಲ್ಸ್: ಸಂಚಾರಿ ಡೀಸೆಲ್ ಸೌಲಭ್ಯ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಭಾರತ್ ಪೆಟ್ರೋಲಿಯಂ ಕಂಪೆನಿ ಲಿ. ನೂತನ ಗ್ರಾಹಕ ಅನುಕೂಲ ವ್ಯವಸ್ಥೆ ‘ಫ್ಯೂಯಲ್ ಕಾರ್ಟ್’ ವಾಹನದ ಮೂಲಕ ಡೀಸೆಲ್ ಇಂಧನ ಕರೆಯ ಮೇರೆಗೆ ಉದ್ಯಮಗಳಿಗೆ ತಲುಪಿಸುವ ಸೌಲಭ್ಯವನ್ನು ಬಿಪಿಸಿಎಲ್‌ನ ಜನರಲ್ ಮೆನೇಜರ್ ಟಿ. ಎನ್. ರಾಮಕೃಷ್ಣನ್ ಉದ್ಘಾಟಿಸಿದರು.

ಕಾಲಕ್ಕೆ ಅನುಗುಣವಾಗಿ ಇಂಧನ ಸರಬರಾಜು ಮಾಡುವ ವ್ಯವಸ್ಥೆಯಲ್ಲೂ ಗ್ರಾಹಕರ ಅನುಕೂಲ ಸೌಲಭ್ಯದ ಕಡೆ ಗಮನ ಹರಿಸುತ್ತಿದ್ದೇವೆ. ಕೈಗಾರಿಕೋದ್ಯ ಮಿಗಳು ಸಹಿತ ಹೆಚ್ಚು ಇಂಧನ ಉಪಯೋಗಿಸುವವರಿಗೆ ತುಂಬ ಅನುಕೂಲ ಮಾಡಿಕೊಡುವ ‘ಫ್ಯೂಯಲ್ ಕಾರ್ಟ್’ ಎಂಬ ಸಂಚಾರಿ ಇಂಧನ ಸರಬರಾಜು ಮಾಡುವ ವ್ಯವಸ್ಥೆ ಪರಿಚಯಿಸುತ್ತಿದ್ದೇವೆ. ಮಹಾಲಸಾ ಮೋಟಾರ್ ಫ್ಯೂಯಲ್ಸ್ ಈ ಯೋಜನೆ ಅಳವಡಿಸುವಲ್ಲಿ ಮುತುವರ್ಜಿ ವಹಿಸಿ ಬಿಪಿಸಿಎಲ್ ಕಂಪೆನಿಯ ಉದ್ದೇಶ ಈಡೇರಿಸುತ್ತಿದೆ ಎಂದು ಹೇಳಿದರು.

ಈ ಸಂದರ್ಭ ಕಂಪೆನಿಯ ಟೆರಿಟೆರಿ ಮೆನೇಜರ್ ಸಚಿನ್ ಕುಲಕರ್ಣಿ, ಕೋ ಒರ್ಡಿನೇಟರ್ ಗೋರಕ್‌ನಾಥ್, ಉಡುಪಿ ವಿಭಾಗದ ಸೇಲ್ಸ್ ಆಫೀಸರ್ ಶ್ರಾವ್ಯ, ಹಲವು ಉದ್ಯಮಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಕುಂಭಾಸಿ ಪ್ರಭು ಕುಟುಂಬದವರು ಉಪಸ್ಥಿತರಿದ್ದರು.

ಕೆ. ಪ್ರಜ್ಞೇಶ್ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಗೌರವಿಸಿದರು. ಚೀಪ್ ಜನರಲ್ ಮೆನೇಜರ್ ಟಿ. ಎನ್. ರಾಮಕೃಷ್ಣನ್ ಗ್ರಾಹಕರೊಂದಿಗೆ ವಿಚಾರ ವಿನಿಮಯ ನಡೆಸಿದರು. ಮಹಾಲಸಾ ಮೋಟರ್ ಫ್ಯೂಯಲ್ಸ್ ಪರವಾಗಿ ಕೆ. ಪ್ರಭಾಕರ ಪ್ರಭು ಸ್ವಾಗತಿಸಿದರು.
ಯು. ಎಸ್. ಶೆಣೈ ಕಾರ್ಯಕ್ರಮ ನಿರೂಪಿಸಿದರು.

Exit mobile version