Kundapra.com ಕುಂದಾಪ್ರ ಡಾಟ್ ಕಾಂ

ನಾವುಂದ: ಬೆಳಕು ಎಂಟರ್‌ಪ್ರೈಸಸ್ ಸ್ಥಳಾಂತರಿತ ಕಛೇರಿ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ನಾವುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಜೊಯಿಸರ ಕ್ಲಾಂಪೆಕ್ಸ್‌ನಲ್ಲಿ ಬೆಳಕು ಎಂಟರ್‌ಪ್ರೈಸಸ್‌ನ ಸ್ಥಳಾಂತರಿತ ಕಛೇರಿ ಗುರುವಾರ ಶುಭಾರಂಭಗೊಂಡಿತು.

ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ಅವರು ಸ್ಥಳಾಂತರಿತ ಕಛೇರಿ ಉದ್ಘಾಟಿಸಿದರು. ಈ ಸಂದರ್ಭ ಮರವಂತೆ ಗ್ರಾಮ ಪಂಚಾಯತ್ ಅಧ್ಯಕ್ಷೆ ರುಕ್ಮಿಣಿ, ಕಟ್ಟದ ಮಾಲಿಕರಾದ ಚಂದ್ರ ಜೋಯಿಸ್, ಉದ್ಯಮಿ ನೌಷದ್, ಬೆಳಕು ಎಂಟರ್‌ಪ್ರೈಸಸ್‌ನ ಮಾಲೀಕ ಉದಯ ಹಾಗೂ ಅವರ ತಂದೆತಾಯಿಗಳಾದ ಯಶೋಧ ಹಾಗೂ ನಾರಾಯಣ ದಂಪತಿಗಳು ಸೇರಿದಂತೆ ಇತರರರು ಉಪಸ್ಥಿತರಿದ್ದರು.

ಕಳೆದ ಮೂರು ವರ್ಷಗಳಿಂದ ಬೆಳಕು ಎಂಟರ್‌ಪ್ರೈಸಸ್ – ಕಾಮನ್ ಸರ್ವಿಸ್ ಸೆಂಟರ್ ಹಾಗೂ ಸೇವಾ ಸಿಂಧು ಮೂಲಕ ಸರಕಾರಿ ಸೇವೆಗಳು, ಸ್ಕಾಲರ್‌ಶಿಪ್ ಸಲ್ಲಿಕೆ, ಉದ್ಯೋಗದ ಅರ್ಜಿ ಸಲ್ಲಿಕೆ ಸೇರಿದಂತೆ ಹತ್ತು ಹಲವು ಸೇವೆಗಳನ್ನು ಯಶಸ್ವಿಯಾಗಿ ನೀಡಲಾಗುತ್ತಿದೆ.

Exit mobile version