Site icon Kundapra.com ಕುಂದಾಪ್ರ ಡಾಟ್ ಕಾಂ

ಕಿರಿಮಂಜೇಶ್ವರ: ರಕ್ಷಾ ಬಂಧನ, ವಿವಿಧ ಸೇವಾನಿರತರಿಗೆ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಕಿರಿಮಂಜೇಶ್ವರದ ನಾಣು ಚಂದನ್ ಅವರ ನೇತೃತ್ವ ಮತ್ತು ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ರಕ್ಷಾಬಂಧನ ದಿನಾಚರಣೆಯಲ್ಲಿ ವಿವಿಧ ಸೇವಾನಿರತರನ್ನು ಸನ್ಮಾನಿಸಲಾಯಿತು.

ಮರವಂತೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಧರ್ಮದರ್ಶಿ ತಿಮ್ಮ ವಿ. ದೇವಾಡಿಗ ಕಾರ್ಯಕ್ರಮ ಉದ್ಘಾಟಿಸಿದರು.

ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬೈಂದೂರು ತಾಲ್ಲೂಕು ಪಂಚಾಯಿತಿ ನಿಕಟ ಪೂರ್ವ ಅಧ್ಯಕ್ಷ ಮಹೇಂದ್ರ ಪೂಜಾರಿ, ಕಿರಿಮಂಜೇಶ್ವರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶೇಖರ ಖಾರ್ವಿ, ಧಾರ್ಮಿಕ ಚಟುವಟಿಕೆ ನಡೆಸುತ್ತಿರುವ ಪದ್ಮಾವತಿ ಟಿ. ದೇವಾಡಿಗ ಅವರು ಸನ್ಮಾನ ಸ್ವೀಕರಿಸಿದರು.

ಕೋವಿಡ್ ವಾರಿಯರ್ಸ್ ದುಡಿಯುತ್ತಿರುವ ಕಿರಿಮಂಜೇಶ್ವರ ಗ್ರಾಮದ ಎಲ್ಲ ಆಶಾ ಕಾರ್ಯಕರ್ತರ ಸೇವೆಯನ್ನು ಗುರುತಿಸಿ ಅವರಿಗೆ ಕಿರು ಕಾಣಿಕೆ ನೀಡಿ ಶುಭ ಕೋರಲಾಯಿತು. ಮೀನುಗಾರಿಕಾ ಇಲಾಖೆಯ ನಿವೃತ್ತ ಅಧಿಕಾರಿ ಸಿ. ಎಸ್. ಖಾರ್ವಿ ನಿರೂಪಿಸಿದರು.

Exit mobile version