Site icon Kundapra.com ಕುಂದಾಪ್ರ ಡಾಟ್ ಕಾಂ

ಕಾರವಾರ – ಬೆಂಗಳೂರು ಹಗಲು ರೈಲು ಕುಂದಾಪುರಕ್ಕೆ ಬೇಗ ತಲುಪಲಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕಾರವಾರ – ಬೆಂಗಳೂರು ಹಗಲು ರೈಲು ಕುಂದಾಪುರಕ್ಕೆ ಬೇಗನೆ ತಲುಪುವಂತೆ ಕ್ರಮ ವಹಿಸಬೇಕು ಎಂದು ಕುಂದಾಪುರ ರೈಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿ ಸಂಸದರು ಹಾಗೂ ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಿದೆ.

ಬೆಂಗಳೂರಿನಿಂದ ಬರುವಾಗ ಮಂಗಳೂರು ಜಂಕ್ಷನ್ ಬೇಗನೇ ತಲುಪುತ್ತಿದ್ದು ಅಲ್ಲಿಂದ ಕೊಂಕಣ ರೈಲ್ವೆ ಪ್ರವೇಶಿಸಲು ವಿಪರೀತ ವಿಳಂಬವಾಗುತ್ತಿದೆ. ಕುಂದಾಪುರಕ್ಕೆ ಸಂಜೆ 6 ಗಂಟೆಯೊಳಗೆ ತಲುಪುವಂತೆ ವೇಳಾಪಟ್ಟಿ ಬದಲಾಯಿಸಬೇಕು ಎಂದು ಸಮಿತಿ ಮನವಿಯಲ್ಲಿ ತಿಳಿಸಿದೆ.

ಸಂಜೆ ನಾಲ್ಕರಿಂದ ಏಳರವರೆಗೆ ವಿಸ್ಟಾಡೋಮ್ ಸೌಂದರ್ಯ ಪ್ರಯಾಣಿಕರಿಗೆ ಲಭ್ಯವಾಗಲಿದೆ ಬೇಗನೇ ರೈಲು ಬರುವುದರಿಂದ ಕಾರವಾರ ಕಡೆ ತೆರಳುವ ಮತ್ತು ಕರಾವಳಿಗೆ ಬಂದಿಳಿಯುವ ಜನರಿಗೂ ಅನುಕೂಲವಾಗಲಿದೆ. ಯಶವಂತಪುರ ಕಾರವಾರ ರೈಲು ಸೇರಿದಂತೆ ಯಾವುದೇ ರೈಲಿಗೂ ಕುಂದಾಪುರ ನಿಲ್ದಾಣದಲ್ಲಿ ರಿಸರ್ವಡ್ ಮತ್ತು ಅನ್ ರಿಸರ್ವಡ್ ಟೀಕೆಟ್ ಸಿಗದೆ ಇರುವುದು ತೀವ್ರ ಸಮಸ್ಯೆ ತಂದೊಡ್ಡಿದೆ. ಕೌಂಟರ್ ಟಿಕೆಟ್ ಸಿಗದೆ ಇರುವುದರಿಂದ ಮತ್ತೊಂದು ಸಮಸ್ಯೆಯಾಗಿದೆ. ಪೋಸ್ಟ್ ಆಫೀಸ್ ಪಿಆರ್‌ಎಸ್ ಸಂಪೂರ್ಣ ವಿಫಲವಾಗಿದೆ. ಸಮಸ್ಯೆಗಳನ್ನು ಕೂಡಲೆ ಪರಿಹರಿಸಲು ಕ್ರಮ ವಹಿಸಬೇಕು ಎಂದು ಸಮಿತಿ ಮನವಿಯಲ್ಲಿ ವಿವರಿಸಿದೆ.

Exit mobile version