ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನೀಡಲಾದ ಅಂಬುಲೆನ್ಸ್ ಹಾಗೂ ಕೆಎಸ್‌ಐಐಡಿಸಿಯಿಂದ ನೀಡಲಾದ ಮಿನಿ ಅಂಬ್ಯುಲೆನ್ಸ್‌ನ್ನು ಬುಧವಾರ ಲೋಕಾರ್ಪಣೆಗೊಳಿಸಲಾಯಿತು.
ಹಿಂದೂಳಿದ ಮತ್ತು ಸಮಾಜ ಕಲಾಖ್ಯ ಕಲ್ಯಾಣಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಅಂಬುಲೆನ್ಸ್ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭ ಸಂಸದ ಬಿ. ವೈ. ರಾಘವೇಂದ್ರ, ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ, ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ (ಕೆ.ಎಸ್.ಐ.ಐ.ಡಿ.ಸಿ) ನಿರ್ದೇಶಕ ಸಿ. ಆರ್. ಗಾಯತ್ರಿದೇವಿ, ಕರ್ನಾಟಕ ಬಾಲ ಭವನ ಬೆಂಗಳೂರು ಇದರ ನಿರ್ದೇಶಕರಾದ ಪದ್ಮಿನಿ, ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ., ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ದೀಪಕ್‌ಕುಮಾರ್ ಶೆಟ್ಟಿ, ಕಾರ‍್ಯದರ್ಶಿ ಪ್ರಕಾಶ್ ಜಿಡ್ಡು, ಜಿಪಂ ಮಾಜಿ ಸದಸ್ಯರಾದ ಬಾಬು ಶೆಟ್ಟಿ, ಸುರೇಶ್ ಬಟವಾಡಿ, ರಾಜ್ಯ ಯೋಜನಾ ಆಯೋಗ ಮಂಡಳಿಯ ಅಧಿಕಾರೇತರ ಸದಸ್ಯೆ ಪ್ರಿಯದರ್ಶಿನಿ ಕಮಲೇಶ್ ಮೊದಲಾದವರು ಉಪಸ್ಥಿತರಿದ್ದರು.
ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಬಿ. ವೈ. ರಾಘವೇಂದ್ರ ಅವರು ರೂ. 25 ಲಕ್ಷ ಮೌಲ್ಯದ ಅಡ್ವಾನ್ಸ್ ಲೈಫ್ ಸಪೋರ್ಟಿಂಗ್ ಅಂಬ್ಯುಲೆನ್ಸ್‌ನ್ನು ಬೈಂದೂರು ಆಸ್ಪತ್ರೆಗೆ ನೀಡಿದ್ದು, ಆಕ್ಸಿಜನ್, ಕಾರ್ಡಿಕ್ ಮಾನಿಟರ್, ಇಸಿಜಿ ಸೇರಿದಂತೆ ಹಲವು ಅತ್ಯಾಧುನಿಕ ಸೌಲಭ್ಯಗಳನ್ನು ಅಂಬ್ಯುಲೆನ್ಸ್ ಒಳಗೊಂಡಿದೆ. ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದಿಂದ ಸಂಸದರ ಬೇಡಿಕೆಯಂತೆ ಮಿನಿ ಅಂಬ್ಯುಲೆನ್ಸ್ ನೀಡಲಾಗಿದೆ.