Kundapra.com ಕುಂದಾಪ್ರ ಡಾಟ್ ಕಾಂ

ಸಾಧನ ಸಂಗಮ: ಕಲಾ ಗ್ಯಾಲರಿ, ಏಕವ್ಯಕ್ತಿ ಪ್ರದರ್ಶನ ಉದ್ಘಾಟನೆ

ಕುಂದಾಪುರ: ಪ್ರತಿಯೊಬ್ಬ ವ್ಯಕ್ತಿಯೊಳಗೊಬ್ಬ ಕಲಾವಿದನಿದ್ದಾನೆ. ಆದರೆ ಎಲ್ಲರಿಗೂ ಅವರಲ್ಲಿನ ಕಲೆಯನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ. ಕಲೆಗೊಂದು ಸೂಕ್ತ ಅವಕಾಶ ಸಿಕ್ಕಾಗ ಅದು ಅರಳುತ್ತದೆ ಎಂದು ಮಣಿಪಾಲದ ಉದ್ಯಮಿ  ಬಾಲಕೃಷ್ಣ ಶೆಣೈ ಹೇಳಿದರು.

ಕುಂದಾಪುರದ ಸಾಧನ ಸಂಗಮ ಟ್ರಸ್ಟ್‌ನ ಮೋಹನ ಮುರಳಿ ಕಲಾ ಗ್ಯಾಲರಿ ಹಾಗೂ ಸಿದ್ಧಾರ್ಥ ಮಯ್ಯ ಉಪ್ಪುಂದ ಇವರ ಏಕವ್ಯಕ್ತಿ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ಚಿತ್ರಕಲಾ ಶಿಕ್ಷಕ ಉಪಾಧ್ಯಾಯ ಮೂಡುಬೆಳ್ಳೆ ಮಾತನಾಡಿ ಅಂಗವಿಕಲತೆ ಇದ್ದರೂ ಸಹ ಅದನ್ನು ಮೀರಿ ಮಾಡುವ ಸಾಧನೆ ಆ ವ್ಯಕ್ತಯ ಎಲ್ಲಾ ವೈಕಲ್ಯಗಳನ್ನು ತೊಡೆದು ಹಾಕುತ್ತದೆ. ಸಿದ್ಧಾರ್ಥ ಮಯ್ಯ ಅವರ ಆಧನೆ ನಿಜಕ್ಕೂ ಶ್ಲಾಘನಾರ್ಹ ಎಂದವರು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಕುಂದಾಪುರ ಎಮ್. ಎಮ್ ಶಾಲೆಯ ಪ್ರಾಂಶುಪಾಲೆ ಚಿಂತನ ರಾಜೇಶ್, ಅಂಕಣಕಾರ್ತಿ ಶೋಭಾ ಅರಸ್ ಉಪಸ್ಥಿತರಿರುತ್ತಾರೆ.

ಮಂಜುನಾಥ ಮಯ್ಯ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಾಧನ ಸಂಗಮದ ಅಧ್ಯಕ್ಷ ನಾರಾಯಣ ಐತಾಳ ವಂದಿಸಿದರು. ಶಮಂತ್ ಕಾರ್ಯಕ್ರಮ ನಿರೂಪಿಸಿದರು.

ಗಣೇಶ ಚತುರ್ಥಿಯ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ನಾಲ್ಕು ವಿಭಾಗಗಳಲ್ಲಿ ತಾಲೂಕು ಮಟ್ಟದ ಗಣೇಶ ಚಿತ್ರ ರಚನಾ ಸ್ಪರ್ಧೆ ಏರ್ಪಡಿಸಲಾಗಿತ್ತು.

ಸಿದ್ಧಾರ್ಥ ಮಯ್ಯ ಅವರ ಕಲಾ ಪ್ರದರ್ಶನ ಸಂಜೆ 5 ಗಂಟೆಯವರೆಗೆ ಪ್ರದರ್ಶನಗೊಂಡಿತು.

Exit mobile version