ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನೈಕಂಬ್ಳಿ ಇಲ್ಲಿನ ವಿದ್ಯಾರ್ಥಿಗಳಿಗೆ ಆರ್ಡಿಯ ಸಿಎ ಸುದೀಪ್ ಶೆಟ್ಟಿ ನಾಯಕತ್ವದ ಜ್ಞಾನ ಫೌಂಡೇಶನ್ ಬೆಂಗಳೂರು ಕೊಡಮಾಡಿದ ಉಚಿತ ಸಮವಸ್ತ್ರವನ್ನು ನೈಕಂಬ್ಳಿಯ ಪ್ರೇರಣಾ ಯುವ ವೇದಿಕೆ ವಿತರಿಸಿದರು.
ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ ಮಾತಮಾಡಿ, ಗ್ರಾಮೀಣ ಭಾಗದ ನಮ್ಮ ಶಾಲೆಗೆ ಕಟ್ಟಡಗಳ ಕೊರತೆಯಿದೆ. ಅಗತ್ಯ ಸೌಲಭ್ಯಗಳ ಪೂರೈಕೆಗೆ ದಾನಿಗಳ ಸಹಕಾರ ಅಗತ್ಯವಿದೆ. ಆ ನಿಟ್ಟಿನಲ್ಲಿ ಪ್ರೇರಣಾ ಮತ್ತು ಜ್ಞಾನ ಪೌಂಢೇಶನ್ ಈ ರೀತಿಯ ಸಹಕಾರಕ್ಕೆ ಧನ್ಯವಾದ ತಿಳಿಸಿದರು.
ಪ್ರೇರಣಾ ವೇದಿಕೆಯ ಪ್ರಮುಖರಾದ ಚಂದ್ರ ಶೆಟ್ಟಿ, ನೈನಾ ಆಚಾರ್ಯ, ಉಮೇಶ್ ಆಚಾರ್ಯ, ಶರಣ್ ಶೆಟ್ಟಿ, ಶ್ರೀಷಾ ಆಚಾರ್ಯ ಮತ್ತು ಊರಿನ ಪ್ರಮುಖರಾದ ಪ್ರೀತಮ್ ಶೆಟ್ಟಿ, ಕರುಣಾಕರ ಶೆಟ್ಟಿ, ಕೊರಗಯ್ಯ ಶೆಟ್ಟಿ ಹಾಗು ಪೋಷಕರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ರಾಧಿಕಾ ನಿರೂಪಿಸಿ, ಶಿಕ್ಷಕಿ ಅರ್ಚನಾ ವಂದಿಸಿದರು.