Kundapra.com ಕುಂದಾಪ್ರ ಡಾಟ್ ಕಾಂ

ತ್ರಾಸಿಯಲ್ಲಿ ದೋಣಿ ಮಗುಚಿ ಬಲೆ, ಇಂಜಿನ್ ಸಮುದ್ರಪಾಲು. ಮೀನುಗಾರರು ಪಾರು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ಹೊಸಾಡು ಗ್ರಾಮದ ಕಂಚಗೋಡು ಸಮೀಪ ಭಾನುವಾರ ಎರಡು ಮೀನುಗಾರಿಕಾ ದೋಣಿಗಳು ಮಗುಚಿದ ಪರಿಣಾಮ ಹಾನಿ ಉಂಟಾಗಿದ್ದು ಮೀನುಗಾರರು ಪಾರಾಗಿದ್ದಾರೆ.

‘ಓಂಕಾರ್ ಪ್ರಸನ್ನ’ ಎಂಬ ಹೆಸರಿನ ದೋಣಿಯಲ್ಲಿ ಹೊಸಾಡು ಗ್ರಾಮದ ಕಂಚಗೋಡು ನಿವಾಸಿಗಳಾದ ರಾಮ ಖಾರ್ವಿ, ವಿನಯ ಖಾರ್ವಿ ನಾಗರಾಜ ಖಾರ್ವಿ ಮಿನುಗಾರಿಕೆಗೆ ತೆರಳಿದ್ದರು. ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಬಂದ ಭಾರಿ ಗಾಳಿ ಮಳೆ ಮತ್ತು ಅಲೆಗಳ ಹೊಡೆತಕ್ಕೆ ದೋಣಿ ಮಗುಚಿದೆ. ಸಮೀಪದಲ್ಲಿ ಮಹಾಲಕ್ಷ್ಮೀ ಎಂಬ ಹೆಸರಿನ ದೋಣಿಯಲ್ಲಿ ಮೀನುಗಾರಿಕೆ ನಿರತರಾಗದ್ದ ವಿಘ್ನೇಶ್ ಖಾರ್ವಿ, ಪ್ರಮೋದ್ ಖಾರ್ವಿ, ದೇವದಾಸ್ ಖಾರ್ವಿ, ಶಿವರಾಜ್ ಖಾರ್ವಿ, ಅಂಬರೀಶ್ ಖಾರ್ವಿ ಮುಳುಗುತ್ತಿದ್ದ ದೋಣಿಯತ್ತ ಧಾವಿಸಿ ಬಂದು ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ. ದೋಣಿ, ಬಲೆ, ಎಂಜಿನ್, ಇತರ ಸಲಕರಣೆಗಳು ಮುಳುಗಿದ್ದು, ರೂ.4.5 ಲಕ್ಷ ನಷ್ಟ ಸಂಭವಿಸಿದೆ.

ತ್ರಾಸಿ ಹೊಸಪೇಟೆಯಿಂದ ಮೀನುಗಾರಿಕೆಗೆ ತೆರಳಿದ್ದ ಯಕ್ಷೇಶ್ವರಿ ಅನುಗ್ರಹ ದೊಣಿಯಿಂದ ಸಮುದ್ರಕ್ಕೆ ಬಿದ್ದ ನಾಗ ಖಾರ್ವಿ, ನಿತ್ಯಾನಂದ, ರೋಷನ್ ಖಾರ್ವಿ, ಈಜಿ ದಡ ಸೇರಿದ್ದಾರೆ.

ದೋಣಿಯಲ್ಲಿದ್ದ ಸಲಕರಣೆಗಳಿಗೆ ಹಾನಿ ಉಂಟಾಗಿದೆ. ದೋಣಿ ಬಂಡೆಗೆ ಬಡಿದು ದೋಣಿ ಮತ್ತು ಎಂಜಿನ್’ಗೆ ಹಾನಿಯಾಗಿದೆ. ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version