Site icon Kundapra.com ಕುಂದಾಪ್ರ ಡಾಟ್ ಕಾಂ

ರಾಷ್ಟ್ರ ಮಟ್ಟದ ಟ್ರೈಲ್ಸ್ ಸ್ವರ್ಧೆಗೆ ಎಂ. ಗುರುದೀಪಕ ಕಾಮತ್ ಆಯ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ:
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದ ರಾಜ್ಯ ಮಟ್ಟದ ಟ್ರೈಲ್ಸ್‌ನಲ್ಲಿ ಭಾಗವಹಿಸಿದ್ದ ಕುಂದಾಪುರ ತಾಲೂಕಿನ ತ್ರಾಸಿ ಅಂಚೆ ಕಛೇರಿಯ ಎಂ. ಗುರುದೀಪಕ ಕಾಮತ್ ರಾಷ್ಟ್ರ ಮಟ್ಟದ ಸ್ವರ್ಧೆಗೆ ಆಯ್ಕೆಯಾಗಿದ್ದಾರೆ.

ಗುರುದೀಪಕ ಕಾಮತ್ ಅವರೊಂದಿಗೆ ಬಿ.ಜಿ.ಜಿಗಣಿ ಪೋಸ್ಟ್ ಆಫೀಸಿನ ಶಿವಕುಮಾರ್, ಚಿಕ್ಕಮಗಳೂರಿನ ಜಯಂತ ನಟರಾಜ್, ಬೆಂಗಳೂರಿನ ಭರತ್ ಕೆ.ಎಸ್. ಮತ್ತು ಕೆ.ಗಣೇಶ ಕಿಣಿ ಹಾಗೂ ಶಿವಮೊಗ್ಗದ ಎಂ.ನಾಗರಾಜ್ ಮತ್ತು ಸಂದೀಪ ಮಲ್ಲಿಕ್ ಅವರು ರಾಜಸ್ತಾನದ ಜೈಪುರದಲ್ಲಿ ನಡೆಯಲಿರುವ 36ನೇ ಅಂಚೆ ಇಲಾಖೆಯ ರಾಷ್ಟ್ರೀಯ ಮಟ್ಟದ ವೈಟ್ ಲಿಫ್ಟಿಂಗ್, ಪವರ್ ಲಿಫ್ಟಿಂಗ್ ಮತ್ತು ಬೆಸ್ಟ್ ಫಿಸಿಕ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

Exit mobile version