Kundapra.com ಕುಂದಾಪ್ರ ಡಾಟ್ ಕಾಂ

ಅತ್ಯಾಚಾರ ಪ್ರಕರಣ ಖಂಡಿಸಿ ವಿಮೆನ್ಸ್ ಫ್ರಂಟ್ ಪ್ರತಿಭಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ದೇಶಾದ್ಯಂತ ನಡೆಯುತ್ತಿರುವ ಹೆಣ್ಣು ಮಕ್ಕಳ ಮೇಲಿನ ಪ್ರಕರಣ ಖಂಡಿಸಿ ಇಲ್ಲಿನ ಶಾಸ್ತ್ರೀ ವೃತ್ತದ ಎದುರು ನ್ಯಾಷನಲ್ ವಿವೆನ್ಸ್ ಫ್ರಂಟ್ ಕುಂದಾಪುರ ಘಟಕ ವತಿಯಿಂದ ಪ್ರತಿಭಟನೆ ನಡೆಯಿತು.

ವಿವೆನ್ಸ್ ಫ್ರಂಟ್ ವಲಯಾಧ್ಯಕ್ಷೆ ನಸೀಮ್ ಝರೈದ್ ಮಾತನಾಡಿ, ಮಹಿಳೆ ಮತ್ತು ಹೆಣ್ಣುಮಕ್ಕಳ ಪಾಲಿಗೆ ಭಾರತ ಹೆಚ್ಚು ಅಪಯಕಾರಿ ದೇಶವಾಗಿ ಮುನ್ನಡೆಯುತ್ತಿರುವುದು ದುರಂತ ಹೆಣ್ಣುೈಮಕ್ಕಳ ಸುರಕ್ಷತೆಗೆ ಸರಕಾರ ಒತ್ತು ನೀಡಬೇಕು ಅತ್ಯಾಚಾರಿಗಳಿಗೆ ಕಠಿಣ ಶಿಕ್ಷಯಾಗುವಂತೆ ನೋಡಿಕೊಳ್ಳಬೇಕು ಎಂದರು.

ವಲಯ ಕಾರ್ಯದರ್ಶಿ ನಾಝಿಯಾ ಇನ್ನಿತರರು ಇದ್ದರು. ಬಳಿಕ ಹೆಣ್ಣು ಮಕ್ಕಳ ಸುರಕ್ಷತೆಯ ಬೇಡಿಕೆ ಮುಂದಿಟ್ಟು ತಾಲೂಕಿನ ಸರಕಾರಿ ಅಧಿಕಾರಿಗಳ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

Exit mobile version