Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: 65ನೇ ವಿಮಾ ಸಪ್ತಾಹದ ಸಮಾರಂಭ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
65ನೇ ವಿಮಾ ಸಪ್ತಾಹದ ಸಮಾರೋಪ ಸಮಾರಂಭ ಇಲ್ಲಿನ ಎಲ್.ಐ.ಸಿ ಶಾಖೆಯಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಕುಂದಾಪುರ ನಗರ ಸಭಾ ಅಧ್ಯಕ್ಷೆ ವೀಣಾ ಭಾಸ್ಕರ್ ಮಾತನಾಡಿ, ಮನೆ ಮನೆ ಯಲ್ಲಿ ಎಲ್.ಐ.ಸಿ ಜ್ಯೋತಿ ಪಾಲಿಸಿಗಳ ಮೂಲಕ ಬೆಳಗಲಿ ಎಂದು ಕರೆ ನೀಡಿದರು.

ಸಭೆಯ ಅಧ್ಯಕ್ಷತೆ ಮುಖ್ಯ ಪ್ರಬಂಧಕ ನಾರಾಯಣ ಗೌಡ ವಹಿಸಿದ್ದರು. ಆಡಳಿತ ಅಧಿಕಾರಿ ಕಿರಣ್ ಕಾಮತ್, ಉಪ ಶಾಖಾಧಿಕಾರಿ ಶ್ರೀನಿವಾಸ್ ವಿಮಾ ಸಪ್ತಾಹ ದ ವರದಿ ನೀಡಿದರು. ವಿಮಾ ಸಪ್ತಾಹದ ಅಂಗವಾಗಿ ನಡೆದ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು.

ಇದೇ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳಾದ ಎಚ್ ಎಸ್ ಹತ್ವಾರ, ಶೇಷಯ್ಯ, ರಾಧಾಕ್ರಷ್ಣ, ಮತ್ತು ಸುಧಾಕರ ಅವರನ್ನು ಗೌರವಿಸಿಲಾಯಿತು. ಗೀತಾ ಸ್ವಾಗತಿಸಿದರು, ಅಭಿವೃದ್ಧಿ ಅಧಿಕಾರಿ ಗಿರಿಧರ್ ನಾಯಕ ಕಾರ್ಯಕ್ರಮ ನಿರ್ವಹಿಸಿದರು. ಮಮತೇಶ್ ವಂದಿಸಿದರು.

Exit mobile version